ಮಾನವ ನಿರ್ಮಿತವಾದ ಯಾವುದೇ ವಸ್ತುವಾದರೂ ಅದಕ್ಕೆ ಜೈವಿಕಾನುಕರಣೆಯ (ಬಯೋಮಿಮಿಕ್ಸ್) ಪ್ರೇರಣೆ ಇದ್ದಿದ್ದೇ. ವಿಮಾನಗಳ ಹಾರಾಟದ ಸಿದ್ಧಾಂತಗಳನ್ನು ಪಕ್ಷಿಗಳು ಹಾಗೂ ಕೀಟಗಳ ಹಾರಾಟದ ಹಿಂದಿನ ಜೈವಿಕ ರಚನೆಗಳನ್ನು ಅರಿತು ಅಭಿವೃದ್ಧಿ ಪಡಿಸಿದವೇ ಆಗಿವೆ.
ಹೀಗಾಗಿ, ಅದೇನೇ ಅನ್ವೇಷಣೆ ಮಾಡಿದರೂ ಸಹ ಮಾನವ ಪ್ರಕೃತಿಯಿಂದಲೇ ಪ್ರೇರಣೆ ಪಡೆಯಬೇಕು. ಈ ವಿಚಾರವನ್ನು ನೆನಪಿಸುವ ವಿಡಿಯೋವೊಂದನ್ನು ಕೈಗಾರಿಕೋದ್ಯಮಿ ಆನಂದ್ ಮಹಿಂದ್ರಾ ಶೇರ್ ಮಾಡಿಕೊಂಡಿದ್ದಾರೆ.
“ಹಾರಾಟದ ಮುಂಚಿನ ತಯಾರಿಗಳೆಲ್ಲಾ ವಿಮಾನಗಳಿಗೆ ಮಾತ್ರ ಎಂದು ಹೇಳಿದ್ದು ಯಾರು? ಸ್ವಾಭಾವಿಕ ಟೇಕಾಫ್ ಮುನ್ನ ಈ ಜೀವಿಗಳು ಏನೆಲ್ಲಾ ತಯಾರಿ ಮಾಡುತ್ತವೆ ಎಂದು ನೋಡಿ. ಸೂಕ್ತ ತಯಾರಿ ಇಲ್ಲದೇ ಯಾವುದನ್ನೂ ಆರಂಭಿಸಬೇಡಿ,” ಎಂದು ಜೀವನದ ನೀತಿಯೊಂದರ ಸಂದೇಶದ ಮೂಲಕ ಕೀಟಗಳು ಹಾರುವ ಮುಂಚಿನ ಹೈಪರ್‌ಲ್ಯಾಪ್ಸ್ ವಿಡಿಯೋದೊಂದಿಗೆ ಹಂಚಿಕೊಂಡಿದ್ದಾರೆ ಮಹಿಂದ್ರಾ.