ಬೆಂಗಳೂರು : ನಾಳೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆ ತಮ್ಮ ಅಭಿಮಾನಿಗಳಿಗೆ ಹೆಚ್ಡಿಕೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡ ಹೆಚ್ಡಿಕೆ ‘ ನನ್ನ ಜನ್ಮದಿನವಾದ ಡಿಸೆಂಬರ್ 16ರಂದು, ಅಂದರೆ ನಾಳೆ ನಾನು ಬೆಂಗಳೂರು ನಗರದಲ್ಲಿ ಲಭ್ಯವಿರುವುದಿಲ್ಲ. ಕಾರ್ಯಕರ್ತರಾದಿಯಾಗಿ ನನ್ನ ಮೇಲೆ ಪ್ರೀತಿ, ವಾತ್ಸಲ್ಯ ಇರಿಸಿರುವ ಪ್ರತಿಯೊಬ್ಬರೂ ನನ್ನ ವೈಯಕ್ತಿಕ ಭೇಟಿಗೆ ಪ್ರಯತ್ನಿಸದೇ ತಾವು ಇದ್ದಲ್ಲಿಂದಲೇ ಶುಭ ಕೋರಬೇಕಾಗಿ ನಿಮ್ಮೆಲ್ಲರಲ್ಲೂ ವಿನಂತಿ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ.