ಅಂಬಾನಿ ಕುಟುಂಬ ನೂತನವಾಗಿ ಆರಂಭಿಸಿರುವ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ನೀತಾ ಅಂಬಾನಿಯವರ ನೃತ್ಯ ಗಮನ ಸೆಳೆದಿದ್ದು ವೈರಲ್ ಆಗಿದೆ. ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ಪ್ರಾರಂಭಿಸಿದ್ದಾರೆ.
ಈವೆಂಟ್‌ನ ‘ದಿ ಗ್ರೇಟ್ ಇಂಡಿಯನ್ ಮ್ಯೂಸಿಕಲ್: ಸಿವಿಲೈಸೇಶನ್ ಟು ನೇಷನ್’ ನಲ್ಲಿ ನೀತಾ ಅಂಬಾನಿ ʼರಘುಪತಿ ರಾಘವ ರಾಜಾರಾಂʼ ಗೀತೆಗೆ ನೃತ್ಯ ಮಾಡುವ ಮೂಲಕ ವಿಶೇಷ ಪ್ರದರ್ಶನ ನೀಡಿದರು. ಅವರ ನೃತ್ಯದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ. ಗುಲಾಬಿ ಮತ್ತು ಕೆಂಪು ಬಣ್ಣದ ಲೆಹೆಂಗಾ ಧರಿಸಿ ರಘುಪತಿ ರಾಘವ ರಾಜಾರಾಂ ಗೀತೆಗೆ ಹೆಜ್ಜೆ ಹಾಕಿರುವ ನೀತಾ ಅಂಬಾನಿ ನೃತ್ಯ ಗಮನ ಸೆಳೆದಿದೆ.
ಶುಕ್ರವಾರ, ಮುಂಬೈನಲ್ಲಿ NMACC ಪ್ರಾರಂಭವಾಯಿತು. ಶಾರುಖ್ ಖಾನ್, ನಿಕ್ ಜೋನಾಸ್ ಜೊತೆ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಆಲಿಯಾ ಭಟ್, ಜಾನ್ವಿ ಕಪೂರ್, ವರುಣ್ ಧವನ್, ಕೃತಿ ಸನನ್, ಕರೀನಾ ಕಪೂರ್, ಅಮೀರ್ ಖಾನ್, ಸೈಫ್ ಅಲಿ ಖಾನ್, ಕರಿಷ್ಮಾ ಕಪೂರ್, ವಿದ್ಯಾ ಬಾಲನ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು,ಅಂಬಾನಿ ಕುಟುಂಬಸ್ಥರು ಸೇರಿದಂತೆ ಹೆಚ್ಚಿನ ತಾರೆಯರು ಭಾಗವಹಿಸಿದ್ದರು.
Nita Ambani performs on 'Raghupati Raghav Raja Ram' (WATCH) pic.twitter.com/PftLsm9IAj
— Vipin Vijayan (@Vipin_Vijayan_) April 1, 2023