
ಇತ್ತೀಚಿಗಷ್ಟೇ ತನ್ನ ಟ್ರೈಲರ್ ಮೂಲಕವೇ ಭರ್ಜರಿ ಸೌಂಡ್ ಮಾಡಿದ್ದ ರವೀಂದ್ರ ನಿರ್ದೇಶನದ ನೈಟ್ ಕರ್ಫ್ಯೂ ಚಿತ್ರವನ್ನು ಇಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿದೆ. ರವೀಂದ್ರ ಅವರೇ ಈ ಸಿನಿಮಾ ನಿರ್ದೇಶನ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದು, ಅನಿಲ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಈ ಚಿತ್ರವನ್ನು ಸ್ವರ್ಣ ಗಂಗಾ ಫಿಲಂಸ್ ಬ್ಯಾನರ್ ನಲ್ಲಿ ಬಿಎಸ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದು ಮಾಲಾಶ್ರೀ ಸೇರಿದಂತೆ ರಂಜನಿ ರಾಘವನ್, ರಂಗಾಯಣ ರಘು, ಸಾಧು ಕೋಕಿಲ, ಸಹನ ಶ್ರೀ, ಮಂಜು ಪಾವಗಡ, ಬಾಲರಾಜವಾಡಿ. ವರ್ಧನ್ ತೀರ್ಥಹಳ್ಳಿ. ಮತ್ತು ಅಶ್ವಿನಿ ತೆರೆ ಹಂಚಿಕೊಂಡಿದ್ದಾರೆ. ಜಾಗ್ವಾರ್ ಸಣ್ಣಪ್ಪ ಸಾಹಸ ನಿರ್ದೇಶನ, ಪ್ರಮೋದ್ ಭಾರತೀಯ ಛಾಯಗ್ರಹಣವಿದೆ.