alex Certify ನೈಜೀರಿಯಾದಲ್ಲಿ ಘೋರ ದುರಂತ : ತೈಲ ಟ್ಯಾಂಕರ್ ಸ್ಪೋಟಗೊಂಡು 20 ಮಂದಿ ಸಜೀವ ದಹನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೈಜೀರಿಯಾದಲ್ಲಿ ಘೋರ ದುರಂತ : ತೈಲ ಟ್ಯಾಂಕರ್ ಸ್ಪೋಟಗೊಂಡು 20 ಮಂದಿ ಸಜೀವ ದಹನ

ನೈಜೀರಿಯಾ : ನೈಜೀರಿಯಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ತೈಲ ಟ್ಯಾಂಕರ್ ಸ್ಪೋಟಗೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ 20 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ನೈಜೀರಿಯಾದ ದಕ್ಷಿಣ ಒಂಡೋ ರಾಜ್ಯದಲ್ಲಿ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ 20 ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ರಸ್ತೆ ಸುರಕ್ಷತಾ ಸಂಸ್ಥೆ ಸೋಮವಾರ ತಿಳಿಸಿದೆ.

ಒಂಡೊದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಮುಖ್ಯಸ್ಥ ಯೆಹೆಜ್ಕೇಲ್ ಸೋನಾಲ್ಲಾ ಅವರ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಜಾರಿ ಒಂಡೋದ ಒಡಿಗ್ಬೊ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. ಚಾಲಕ ಮತ್ತು ಅವರ ಸಹಾಯಕ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ತೈಲ ತೆಗೆದುಕೊಳ್ಳಲು ಜನರು ಟ್ಯಾಂಕರ್ ಸಮೀಪ ಹೋಗಿದ್ದ ವೇಳೆ ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ.

ಸಾವನ್ನಪ್ಪಿದವರು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದಾರೆ ಮತ್ತು ಗುರುತಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...