
ಬೆಂಗಳೂರು: ಬೆಂಗಳೂರು ಪೊಲೀಸ್ ಕಮಿಷ್ನರ್ ಬಿ.ದಯಾನಂದ್ ಅವರ ನಡೆ ಎಲ್ಲರಿಗೂ ಮಾದರಿಯಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಬೊಕ್ಕೆ, ಸಿಹಿತಿನಿಸು ಇವುಗಳು ಬೇಡ ಆ ಹಣವನ್ನು ಅನಾಥಾಶ್ರಮಗಳಿಗೆ ನೀಡಿ ಸಹಾಯ ಮಾಡುವಂತೆ ಸೂಚಿಸಿದ್ದಾರೆ.
ಹೊಸ ವರ್ಷದ ಸಂದರ್ಭದಲ್ಲಿ ಕಿರಿಯ ಅಧಿಕಾರಿಗಳಿಗೆ ಕಮಿಷ್ನರ್ ಈ ವಿಶೇಷ ಸೂಚನೆ ನೀಡಿದ್ದಾರೆ. ಅನಾಥಾಶ್ರಮಗಳಿಗೆ ಸಹಾಯ ಮಾಡಿದ ಆ ಫೋಟೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಿ. ಹೀಗೆ ಅನಾಥಾಶ್ರಮಗಳಿಗೆ ಸಹಾಯ ಮಾಡಿದ ಫೋಟೊ ಹಂಚಿಕೊಳ್ಳುವುದರಿಂದ ಇನ್ನೊಬ್ಬರಿಗೂ ಮಾದರಿಯಾಗುತ್ತೀರ ಎಂದು ಸಲಹೆ ನೀಡಿದ್ದಾರೆ.
ಕೆಲವರು ಭರ್ಜರಿ ಎಣ್ಣೆ ಪಾರ್ಟಿ, ಕೇಕ್ ಕತ್ತರಿಸಿ ಹೊಸ ವರ್ಷ ಸಂಭ್ರಮಿಸಿದರೆ ಇನ್ನು ಹಲವರು ವರ್ಷಕ್ಕೆ ಒಮ್ಮೆ ಎಂದು ದುಂದುವೆಚ್ಚಗಳನ್ನು ಮಾಡುತ್ತಾರೆ. ಈ ರೀತಿ ಹೊಸ ವರ್ಷಾಚರಣೆ ಮಾಡುವ ಬದಲು ಕಿರಿಯ ಅಧಿಕಾರಿಗಳು ಅನಾಥಾಶ್ರಮಗಳಿಗೆ ನೆರವು ನೀಡಿ ಎಂದು ಸೂಚಿಸಿದ್ದಾರೆ. ಕಮಿಷ್ನರ್ ಅವರ ಈ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.