ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಇಂದು ಬಹುನಿರೀಕ್ಷಿತ ಹೊಸ ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಬುಕಿಂಗ್ ಪ್ರಾರಂಭವನ್ನು ಪ್ರಕಟಿಸಿದೆ. ತಮ್ಮ ಹಿಂದಿನ ಆವೃತ್ತಿಗಳ ಅಸಾಧಾರಣ ಯಶಸ್ಸಿನ ನಂತರ, ಹೊಸ ಹ್ಯಾರಿಯರ್ ಮತ್ತು ಸಫಾರಿಗಳ ವಿನ್ಯಾಸಗಳು ಅತ್ಯಾಧುನಿಕ ತಂತ್ರಜ್ಞಾನ, ಸಾಟಿಯಿಲ್ಲದ ಸುರಕ್ಷತಾ ವೈಶಿಷ್ಟ್ಯಗಳು: ನಾವೀನ್ಯ ಮತ್ತು ಶ್ರೇಷ್ಠತೆ ಗಳ ಬಗ್ಗೆ ಟಾಟಾ ಮೋಟಾರ್ಸ್‌ಗೆ ಇರುವ ಸಮರ್ಪಣಾ ಭಾವವನ್ನು ಮತ್ತೊಮ್ಮೆ ಎತ್ತಿ ಹಿಡಿಯಲಿವೆ. ಇಂದಿನಿಂದ ಗ್ರಾಹಕರು, ಎಲ್ಲ ಅಧಿಕೃತ ಟಾಟಾ ಮೋಟಾರ್ಸ್ ಡೀಲರ್‌ಶಿಪ್‌ಗಳಲ್ಲಿ ಅಥವಾ ಕಂಪನಿಯ ವೆಬ್‌ಸೈಟ್‌ನಲ್ಲಿ ಕೇವಲ 25,000 ರೂ. ಗಳನ್ನು ಪಾವತಿಸಿ ಈ ಜೋಡಿ ಎಸ್.ಯು.ವಿ.ಗಳಲ್ಲಿ ತಮಗಿಷ್ಟವಾದುದನ್ನು ಬುಕ್ ಮಾಡಬಹುದು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟಾಟಾ ಪ್ಯಾಸೆಂಜರ್ ಇಲೆಕ್ಟ್ರಿಕ್ ಮೊಬಿಲಿಟಿಯ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಶೈಲೇಶ್ ಚಂದ್ರ “ಇಂದಿನಿಂದ ಹೊಸ ಹ್ಯಾರಿಯರ್ ಮತ್ತು ಸಫಾರಿ ಬುಕ್ಕಿಂಗ್‌ಗಳನ್ನು ಪ್ರಾರಂಭಿಸಲು ನಮಗೆ ಬಹಳ ಸಂತೋಷವಾಗುತ್ತಿದೆ. ಸಮರ್ಥ OMEGARC ಮೇಲೆ ನಿರ್ಮಿಸಲಾಗಿರುವ ಈ ಎಸ್.ಯು.ವಿ. ಗಳು ತಮ್ಮ ಉತ್ಕೃಷ್ಟ ವಿನ್ಯಾಸ, ಉನ್ನತವಾದ ವೈಶಿಷ್ಟ್ಯಗಳು, ಪ್ರೀಮಿಯಂ ಇಂಟೀರಿಯರ್‌ಗಳು ಮತ್ತು ಸದೃಢವಾದ ಪವರ್‌ಟ್ರೇನ್ ಗಳ ಪರಂಪರೆಯನ್ನು ಮುಂದುವರೆಸುತ್ತವೆ; ಆದರೆ, ಇವೆಲ್ಲವನ್ನೂ ಮೊದಲಿಗಿಂತ ಇನ್ನಷ್ಟು ಉತ್ತಮವಾಗಿರುವಂತೆ ಮರುವಿನ್ಯಾಸಗೊಳಿಸಲಾಗಿದೆ. ಟಾಟಾ ಮೋಟಾರ್ಸ್ ಎಸ್‌ಯುವಿಗಳ ಹೊಸ ಅಲೆಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ ಮತ್ತು ಈ ಎರಡು ಉತ್ಪನ್ನಗಳು ನಮ್ಮ ಗ್ರಾಹಕರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳನ್ನು ಮತ್ತು ನಮ್ಮ ಬ್ರ್ಯಾಂಡ್‌ನ ದಕ್ಷತೆಯನ್ನು ಪ್ರತಿನಿಧಿಸುತ್ತವೆ ಎಂಬ ವಿಶ್ವಾಸ ನಮಗಿದೆ” ಎಂದಿದ್ದಾರೆ
ಯುವ ಗ್ರಾಹಕರು ತೀವ್ರವಾಗಿ ಬಯಸುವ ಚೈತನ್ಯಶೀಲತೆ ಮತ್ತು ಸ್ಪೋರ್ಟಿ ವಿನ್ಯಾಸ ಗಳಿರುವ ಈ ಹೊಸ ಹ್ಯಾರಿಯರ್ ಸಾಹಸಿ ಯುವಕರ ಅದಮ್ಯ ಮನೋಭಾವವನ್ನು ಪ್ರತಿನಿಧಿಸುತ್ತದೆ. ಈ ಕಾರು ನಾಲ್ಕು ವಿಭಿನ್ನ ಮಾದರಿಗಳಲ್ಲಿ ಪರಿಚಯವಾಗುತ್ತಿದೆ – ಸ್ಮಾರ್ಟ್, ಪ್ಯೂರ್, ಅಡ್ವೆಂಚರ್, ಮತ್ತು ಫಿಯರ್ಲೆಸ್. ಹೊಸ ಹ್ಯಾರಿಯರ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, 7 ಏರ್ ಬ್ಯಾಗ್‌ಗಳು, ಸ್ಮಾರ್ಟ್ ಇ-ಶಿಫ್ಟರ್ ಮತ್ತು ಪ್ಯಾಡಲ್ ಶಿಫ್ಟರ್‌ಗಳು ಮತ್ತು ಡ್ಯುಯಲ್ ಜೋನ್ ಸಂಪೂರ್ಣ ಸ್ವಯಂಚಾಲಿತ ತಾಪಮಾನ ನಿಯಂತ್ರಣಗಳ ಜೊತೆಗೆ ಎಡಿಎಎಸ್ ನಂತಹ – ಅನೇಕ ವರ್ಗಗಳ ಕಾರುಗಳಲ್ಲಿ ಇದೇ ಮೊದಲ ಸಲ – ವೈಶಿಷ್ಟ್ಯಗಳನ್ನು ಹೊಂದಿದೆ.
ಇದಲ್ಲದೆ, ಎಸ್.ಯು.ವಿ. ವರ್ಗವನ್ನು ಇನ್ನೂ ಒಂದು ಮೇಲು-ಹಂತಕ್ಕೆ ಒಯ್ದು ಅತ್ಯುತ್ತಮ ಅತ್ಯಾಧುನಿಕ ಉತ್ಪನ್ನವನ್ನು ತಲುಪಿಸುವ ಬಗ್ಗೆ ಟಾಟಾ ಮೋಟಾರ್ಸ್‌ಗೆ ಇರುವ ಬದ್ಧತೆಯನ್ನು ಹೊಸ ಸಫಾರಿ ಪ್ರತಿಬಿಂಬಿಸುತ್ತದೆ. ಇದರಲ್ಲಿ ಉನ್ನತ ಮಟ್ಟದ ಐಷಾರಾಮಿ ಮತ್ತು ಸೌಕರ್ಯಗಳು ಅದ್ಭುತವಾಗಿ ಮೇಳೈಸಿವೆ. ಬಯೋ-ಎಲ್.ಇ.ಡಿ. ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು, ಸನ್ನೆಗಳಿಂದ ನಿಯಂತ್ರಿಸಬಹುದಾದ ಪವರ್ ಟೇಲ್‌ಗೇಟ್, 31.24 ಸೆಂ.ಮೀ. ಹರ್ಮನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 13 ಜೆಬಿಎಲ್ ಮೋಡ್‌ಗಳು ಮತ್ತು ಆರ್19 ಮಿಶ್ರಲೋಹಗಳೊಂದಿಗೆ ಹರ್ಮನ್ ಅಡ್ವಾನ್ಸ್ಡ್ ಆಡಿಯೊವರ್X ಇರುವ ಹೊಸ ಸಫಾರಿ, ತನ್ನ ಗ್ರಾಹಕರಿಗೆ ಹಲವಾರು ಹೆಚ್ಚಿನ ಅನುಕೂಲಗಳನ್ನು ನೀಡುತ್ತದೆ; ಇದೊಂದು ಎಲ್ಲರೂ ಬಯಸುವಂತಹ ಸಂಪೂರ್ಣವಾದ ಉತ್ಪನ್ನವಾಗಿದೆ.