ಇಂಟರ್ನೆಟ್‌ನ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಾಲಿವುಡ್ ಗಾಯನಗಳಲ್ಲಿ ಒಂದು ನೋರಾ ಫತೇಹಿ ಅವರ ಓ ಸಾಕಿ ಸಾಕಿ ಹಾಡು. ಈ ಹಾಡಿಗೆ ಇದಾಗಲೇ ಹಲವರು ಡಾನ್ಸ್ ಮಾಡಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಈ ಡಾನ್ಸ್ಗೆ ಸ್ಟೆಪ್ ಹಾಕಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ವೀಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ನೇಪಾಳದವನು ಮತ್ತು ಈ ಹಿಟ್ ಬಾಲಿವುಡ್ ಹಾಡಿಗೆ ಅವರು ಮಾಡಿರುವ ನೃತ್ಯ ಮತ್ತು ಅಭಿನಯಕ್ಕೆ ಜನ ಫಿದಾ ಆಗಿದ್ದಾರೆ. ವಿಶೇಷವೆಂದರೆ ಈ ವ್ಯಕ್ತಿಯ ನೃತ್ಯ ಖುದ್ದು ನೋರಾ ಅವರ ಗಮನವನ್ನೂ ಸೆಳೆದಿದೆ.
ಎವೆರಿಥಿಂಗ್ ಎಬೌಟ್ ನೇಪಾಳ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಶೇರ್ ಮಾಡಲಾಗಿದೆ.
ಈ ವಿಡಿಯೋವನ್ನು 31 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ನೃತ್ಯದ ಚಲನೆಯನ್ನು ತೋರಿಸುವುದನ್ನು ಕಾಣಬಹುದು. ಅವರ ಅಭಿನಯ ಸೂಪರ್ ಎನರ್ಜಿಟಿಕ್ ಆಗಿದೆ. ನೋರಾ ಫತೇಹಿ ಈ ಪೋಸ್ಟ್‌ಗೆ ಪ್ರೀತಿ-ಪ್ರೇಮದ ಎಮೋಜಿಗಳೊಂದಿಗೆ ಕಮೆಂಟ್ ಮಾಡಿದ್ದಾರೆ.
ಅಂದಹಾಗೆ, ಓ ಸಾಕಿ ಸಾಕಿ ಜಾನ್ ಅಬ್ರಹಾಂ ಅವರ ಬಾಟ್ಲಾ ಹೌಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು 2004 ರ ಚಲನಚಿತ್ರ ಮುಸಾಫಿರ್‌ನಲ್ಲಿ ಕಾಣಿಸಿಕೊಂಡ ಹಾಡಿನ ಪುನರಾವರ್ತಿತ ಆವೃತ್ತಿಯಾಗಿದೆ. ಮೂಲ ಆವೃತ್ತಿಯಲ್ಲಿ ಕೊಯೆನಾ ಮಿತ್ರ ನಟಿಸಿದ್ದಾರೆ.
https://youtu.be/87FJFUOvOSE