ಆಸ್ಪತ್ರೆಯ ಶೌಚಾಲಯದಲ್ಲಿ ಪತ್ತೆಯಾಗಿದ್ದ ಹೆಣ್ಣುಭ್ರೂಣದ ತಾಯಿ ಪತ್ತೆ ಮಾಡಿದ ಪೊಲೀಸರು

ಬೆಂಗಳೂರು: ನೆಲಮಂಗಲದ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಪತ್ತೆಯಾಗಿದ್ದ ಹೆಣ್ಣುಭ್ರೂಣದ ತಾಯಿಯನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನೆಲಮಂಗಲದ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಮೇ 7ರಂದು ಹೆಣ್ಣುಭ್ರೂಣವೊಂದು ಪತ್ತೆಯಾಗಿತ್ತು. 5 ತಿಂಗಳ ಹೆಣ್ಣುಭ್ರೂಣ ಅದಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಲಬುರ್ಗಿ ಮೂಲದ 18 ವರ್ಷದ ಯುವತಿ ತಮ್ಮ ಊರಿನ ಯುವಕನೊಬ್ಬನನ್ನು ಪ್ರೀತಿಸಿ, ನಾಲ್ಕು ತಿಂಗಳ ಹಿಂದೆ ತನ್ನ ತಾಯಿ ಜೊತೆ ನೆಲಮಂಗಲಕ್ಕೆ ಬಂದಿದ್ದಳು. ನೆಲಮಂಗಲದ ಬೇಗೂರಿನಲ್ಲಿ ತಾಯಿ ಜೊತೆ ವಾಸವಾಗಿದ್ದಳು.

ಈ ವೇಳೆ ಯುವತಿ ಗರ್ಭನಿರೋಧಕ ಮಾತ್ರೆ ಸೇವಿಸಿ ಹೊಟ್ಟೆ ನೋವಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಮಂಗಳವಾರ ಶೌಚಾಲಯಕ್ಕೆ ತೆರಳಿದಾಗ ಗರ್ಭಪಾತವಾಗಿದೆ. ಹೆಣ್ಣುಭ್ರೂಣವನ್ನು ಶೌಚಾಲಯದಲ್ಲಿ ಹಾಕಿ ಯುವತಿ ಆಸ್ಪತ್ರೆಯಿಂದ ಹೊರನಡೆದಿದ್ದಾಳೆ. ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿ ದೂರು ನಿಡುತ್ತಿದ್ದಂತೆ ಆಸ್ಪತ್ರೆ ಸಿಸಿಟಿವಿ ಪರಿಶೀಲಿಸಿದಾಗ ಯುವತಿ ಬಗ್ಗೆ ತಿಳಿದುಬಂದಿದೆ. ಸದ್ಯ ಯುವತಿಯನ್ನು ಮತ್ತೆ ಆಸ್ಪತ್ರೆಗೆ ಕರೆತಂದು ಬಾಣಂತಿ ಕೊಠಡಿಯಲ್ಲಿ ಆರೈಕೆ ಮಾಡಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read