6 ತಿಂಗಳಿನಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ರದ್ದು ಮಾಡಲು ಆಹಾರ ಇಲಾಖೆ ನಿರ್ಧರಿಸಿದ್ದು, 15, 000 ರೇಷನ್ ಕಾರ್ಡ್ ರದ್ದಾಗಲಿದೆ ಎಂದು ತಿಳಿದು ಬಂದಿದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು 7,08,914 ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಪೈಕಿ ಸುಮಾರು 15,092 ಮಂದಿ ಕಳೆದ ಕೆಲವು ತಿಂಗಳುಗಳಿಂದ ಪಡಿತರ ವಸ್ತು ಪಡೆದುಕೊಳ್ಳುತ್ತಿಲ್ಲ, ಅಂತಹವರ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ.
ಯಾರು ಪಡಿತರವನ್ನು ಪಡೆದುಕೊಳ್ಳುತ್ತಿಲ್ಲವೋ ಅಂಥವರ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಸಮೀಕ್ಷೆ ಕಾರ್ಯ ಆರಂಭವಾಗಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ನ್ನು ಸರ್ಕಾರ ವಿತರಣೆ ಮಾಡಿದೆ, ಆದರೆ ಅದೆಷ್ಟೋ ಜನ ಪಡಿತರ ಚೀಟಿ ಹೊಂದಿದ್ದರು ಕೂಡ ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ. ಹೊರತುಪಡಿಸಿ ಸರ್ಕಾರದ ಇತರ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಮಾತ್ರ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತಹ ಪಡಿತರ ಚೀಟಿಯ ಸಮೀಕ್ಷೆ ನಡೆಸಲು ಆಹಾರ ಇಲಾಖೆ ಮುಂದಾಗಿದೆ.