4 ವರ್ಷದಿಂದ ಮಲ ಮಗಳ ಮೇಲೆ ಅತ್ಯಾಚಾರ: ವಕೀಲ ಅರೆಸ್ಟ್

ನವಿ ಮುಂಬೈ: ನಾಲ್ಕು ವರ್ಷಗಳಿಂದ ತನ್ನ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ್ದ 42 ವರ್ಷದ ವಕೀಲನನ್ನು ಖಾರ್ಘರ್ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆಯ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ ನಂತರ ಮಂಗಳವಾರ ಆರೋಪಿಯನ್ನು ಬಂಧಿಸಲಾಗಿದೆ. ಮೇ 2020ರ ಸುಮಾರಿನಿಂದ ಇಂತಹ ಕೃತ್ಯವೆಸಗಿದ್ದಾನೆ. ಆಗ 10 ವರ್ಷ ವಯಸ್ಸಿನ ಬಾಲಕಿಗೆ ಈಗ 14 ವರ್ಷ. ಆಕೆ ತನ್ನ ಶಾಲೆಯ ಶಿಕ್ಷಕರಿಗೆ ಘಟನೆ ಬಗ್ಗೆ ಹೇಳಿಕೊಂಡ ನಂತರ ಶಿಕ್ಷಕಿ ಸ್ವತಃ ಪೊಲೀಸ್ ಠಾಣೆಗೆ ಹೋಗಿ ಹುಡಗಿಯ ಮಲ ತಂದೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಸಂತ್ರಸ್ತ ಬಾಲಕಿ ತನ್ನ ತಾಯಿಗೆ ನಡೆದ ಘಟನೆ ಬಗ್ಗೆ ಬಹಿರಂಗಪಡಿಸಲು ಧೈರ್ಯ ತಂದುಕೊಳ್ಳಲಿಲ್ಲ. 2018 ರಲ್ಲಿ, ಸಂತ್ರಸ್ತೆಯ ತಾಯಿ ಆರೋಪಿಯೊಂದಿಗೆ ವಿವಾಹವಾದರು. 2020 ರಿಂದ ಆರೋಪಿಯು ಆಕೆಗೆ ಇಷ್ಟವಾದ ಆಹಾರ ಮತ್ತು ಆಟಿಕೆಗಳ ಆಮಿಷ ಒಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಇದನ್ನು ತನ್ನ ತಾಯಿಗೆ ಹೇಳದಂತೆ ಬೆದರಿಕೆಯನ್ನೂ ಹಾಕುತ್ತಿದ್ದ. ತಾಯಿ ಮತ್ತು ಮಲ ತಂದೆಗೆ ಮತ್ತೊಬ್ಬ ಮಗಳು ಕೂಡ ಇದ್ದಾರೆ ಎಂದು ಖಾರ್ಘರ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ ಪೆಕ್ಟರ್ ಸರಳಾ ದಾಸ್‌ ಗುಡೆ ತಿಳಿಸಿದ್ದಾರೆ.

ಕುಟುಂಬವು ಆರಂಭದಲ್ಲಿ ಕಾಮೋಥೆಯಲ್ಲಿ ವಾಸಿಸುತ್ತಿತ್ತು ಮತ್ತು ನಂತರ ಖಾರ್ಘರ್‌ಗೆ ಸ್ಥಳಾಂತರಗೊಂಡಿತು. ಆರೋಪಿ ಎರಡೂ ಮನೆಗಳಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಸಂತ್ರಸ್ತೆಯ ತಾಯಿ ಕೆಲಸದ ನಿಮಿತ್ತ ಹೊರಗೆ ಹೋದಾಗಲೆಲ್ಲ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆರೋಪಿಯನ್ನು ಬಂಧಿಸಲಾಗಿದೆ. ಪನ್ವೇಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಏಪ್ರಿಲ್ 24 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read