
ತನುಷ್ ಶಿವಣ್ಣ ಅಭಿನಯದ ‘mr ನಟ್ವರ್ ಲಾಲ್’ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದ್ದು, ಈ ಟ್ರೈಲರ್ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ನೋಡುಗರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ.
ವಿ ಲಾವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ತನುಷ್ ಶಿವಣ್ಣ ಅವರಿಗೆ ಜೋಡಿಯಾಗಿ ಸೋನಾಲ್ ಮೊಂಟೈರೊ ಅಭಿನಯಿಸಿದ್ದಾರೆ. ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ, ನಾಗಭೂಷಣ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಕೆಎಂ ಪ್ರಕಾಶ್ ಸಂಕಲನ, ವಿಲಿಯಂ ಡೇವಿಡ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಮತ್ತು ಪುಷ್ಪರಾಜು ಸಾಹಸ ನಿರ್ದೇಶನವಿದ್ದು, ಧರ್ಮ ವಿಶ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಟ ತನುಷ್ ಶಿವಣ್ಣ ಅವರೇ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.