ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಸಲು ಬಿಎಂಅರ್ ಸಿಎಲ್ ಮುಂದಾಗಿದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಕೋರಿದೆ.
2011ರಲ್ಲಿ ನಮ್ಮ ಮೆಟ್ರೋ ಕಾರ್ಯಾಚರಣೆ ಆರಂಭಿಸಿದ ಬಳಿಕ ಎರಡನೇ ಬಾರಿಗೆ ಪ್ರಯಾಣ ದರವನ್ನು ಪರಿಷ್ಕರಿಸುವ ಸಾಧ್ಯತೆ ದಟವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಮೆಟ್ರೋ ರೈಲು ದರ ನಿಗದಿ ಸಮಿತಿಗೆ ಅಕ್ಟೋಬರ್ 27ರ ಒಳಗೆ ಸಲಹೆಗಳನ್ನು ನೀಡುವತೆ ನಾಗರಿಕರನ್ನು ಕೋರಿದೆ.
ನಾಗರಿಕರು ತಮ್ಮ ಅಭಿಪ್ರಾಯವನ್ನು ಹಾಗೂ ಸಲಹೆಗಳನ್ನು ಇ-ಮೇಲ್ ಮಾಡಬಹುದು ffc@bmrc.co.inಗೆ ಇಮೇ ಕಳುಹಿಸಬಹುದು. ಅಥವಾ 3ನೇ ಮಹಡಿ, ಸಿ ಬ್ಲಾಕ್ ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್ ರಸ್ತೆ, ಶಾಂತಿನಗರ-ಬೆಂಗಳೂರು-560027ಕ್ಕೆ ಪತ್ರ ಬರೆದು ಕಳುಹಿಸಬಹುದು ಎಂದು ತಿಳಿಸಿದೆ.