ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಗಲಭೆ ನಡೆದು, ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಗಲಭೆಯ ಹಿಂದೆ ಕೇರಳ ಲಿಂಕ್ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ನಾಗಮಂಗಲ ಗಲಭೆಯಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರು ಭಾಗಿಯಾಗಿದ್ದಾರೆ. ಪಕ್ಕಾ ಪ್ಲಾನ್ ಮಾಡಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸರು ದಾಖಲಿಸಿರುವ ಎಫ್ ಐ ಆರ್ ನಲ್ಲಿ ಇಬ್ಬರು ಕೇರಳ ಮೂಲದವರ ಹೆಸರಿದ್ದು, ಬಂಧಿತ 74 ಆರೋಪಿಗಳ ಪೈಕಿ ಇಬ್ಬರು ಕೇರಳ ಮೂಲದವರಾಗಿದ್ದಾರೆ. 44ನೇ ಅರೋಪಿ ಯೂಸೂಫ್, 61ನೇ ಅರೋಪಿ ನಾಸೀರ್ ಕೇರಳದ ಮಲಪ್ಪುರಂ ನಿವಾಸಿಗಳಾಗಿದ್ದಾರೆ. ಇಬ್ಬರೂ ಕೆಲ ದಿನಗಳಿಂದ ನೆಲಮಂಗಲದಲ್ಲಿ ವಾಸವಾಗಿದ್ದರು. ಇಬ್ಬರೂ ನಿಷೇಧಿತ ಪಿಎಫ್ ಐ ಸಂಘಟನೆ ಸದಸ್ಯರೆಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ನಾಗಮಂಗಲ ಗಲಭೆ ಹಿಂದೆ ಕೇರಳ ಲಿಂಕ್ ಇರುವ ಬಗ್ಗೆ ಹಾಗೂ ನಿಷೇಧಿತ ಪಿಎಫ್ ಐ ಸಂಘಟನೆ ಕೈವಾಡದ ಅನುಮಾನ ಇರುವ ಬಗ್ಗೆ ವಿಶ್ವ ಹಿಂದೂ ಪಷತ್ ಆರೋಪಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದೆ.