ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಉಲ್ಲಾಸದ ವೀಡಿಯೊ ಒಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಅಭಿಮಾನಿ ಹುಡುಗಿಯೊಬ್ಬಳು ಶಶಿ ತರೂರ್ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ. ಆಕೆಯ ಪ್ರಶ್ನೆಗೆ ತರೂರ್ ನೀಡಿದ ಉತ್ತರ ಗಮನವನ್ನು ಸೆಳೆದಿದೆ.
ನಾಗಾಲ್ಯಾಂಡ್‌ಗೆ ಭೇಟಿ ನೀಡಿದ ರಾಜಕಾರಣಿ ಭಾಗವಹಿಸಿದ್ದ ಲುಂಗ್ಲೆಂಗ್ ಶೋ ಎಂಬ ಟಾಕ್ ಶೋನಲ್ಲಿ ಈ ಘಟನೆ ನಡೆದಿದೆ. 66 ವರ್ಷದ ರಾಜಕಾರಣಿಗೆ ಹುಡುಗಿಯೊಬ್ಬಳು, ಈ ವಯಸ್ಸಿನಲ್ಲಿಯೂ ಆಶ್ಚರ್ಯಕರ ರೀತಿಯಲ್ಲಿ ಸುಂದರವಾಗಿ ಕಾಣುವ ಮತ್ತು ವರ್ಚಸ್ಸು ಹೆಚ್ಚಿಸಿಕೊಂಡಿರುವ ರಹಸ್ಯ ಏನು ಎಂದು ಕೇಳಿದ್ದಾಳೆ.
ಇದಕ್ಕೆ ತರೂರ್ ಮುಗುಳ್ನಗುತ್ತಾ, ‘ನಿಮ್ಮ ಪೋಷಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ’ ಎಂದು ಮೊದಲು ಹೇಳಿದರು. ನಂತರ ಅದಕ್ಕೆ ಸಮಜಾಯಿಷಿ ಕೊಟ್ಟ ಅವರು, “ನೀವು ತುಂಬಾ ಸಿಹಿ, ತುಂಬಾ ಕರುಣಾಮಯಿ ಮತ್ತು ಉದಾರ ಇರಬಹುದು. ಆದರೆ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಏಕೆಂದರೆ ನೀವು ಕಾಣುವ ರೀತಿ ಮತ್ತು ಎಲ್ಲವೂ ನಿಮ್ಮ ವಂಶವಾಹಿನಿಯಲ್ಲಿದೆ. ಆದ್ದರಿಂದ ನಿಮ್ಮ ಹೆತ್ತವರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳುವುದು ಒಂದೇ ದಾರಿ” ಎಂದು ತಮಾಷೆ ಮಾಡಿದ್ದಾರೆ.