
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆನ್ಲೈನ್ ಮೂಲಕ ದಸರಾ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ದಸರಾ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಐದು ದಿನಗಳ ಕಾಲ ಆನ್ಲೈನ್ ಟಿಕೆಟ್ ಮಾರಾಟ ಮಾಡಲಾಗುವುದು. ಸೆಪ್ಟೆಂಬರ್ 26 ರಿಂದ 30ರವರೆಗೆ ಟಿಕೆಟ್ ಮಾರಾಟ ಮಾಡಲಾಗುತ್ತದೆ.
ಪ್ರತಿದಿನ 1 ಸಾವಿರದಿಂದ 1500 ಗೋಲ್ಡ್ ಕಾರ್ಡ್ ಗಳನ್ನು ಮಾರಾಟ ಮಾಡಲಿದ್ದು, ದಸರಾ ಗೋಲ್ಡ್ ಕಾರ್ಡ್ ಗೆ 6500 ರೂ. ದರ ನಿಗದಿಪಡಿಸಲಾಗಿದೆ. ಗೋಲ್ಡ್ ಕಾರ್ಡ್ ನಲ್ಲಿ ಒಬ್ಬರಿಗೆ ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು, ಚಾಮುಂಡಿ ಬೆಟ್ಟ ಹಾಗೂ ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಿಸುವುದಕ್ಕೆ ಅವಕಾಶ ಇರುತ್ತದೆ.
ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ 3500 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಅರಮನೆಯ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಿಸಬಹುದು. ಪಂಜಿನ ಕವಾಯತು ವೀಕ್ಷಣೆಗೆ ಟಿಕೆಟ್ ದರ 1,000 ರೂ. ನಿಗದಿಪಡಿಸಲಾಗಿದೆ.