alex Certify Mysuru Dasara : ಇಂದು ಸಂಜೆ 4.40 ಕ್ಕೆ ವಿಶ್ವವಿಖ್ಯಾತ ಜಂಬೂಸವಾರಿಗೆ ಸಿಎಂ ಚಾಲನೆ : ಅರಮನೆ ನಗರಿಯಲ್ಲಿ ಚಿನ್ನದ ಅಂಬಾರಿ ನೋಡಲು ಜನರ ಕಾತುರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Mysuru Dasara : ಇಂದು ಸಂಜೆ 4.40 ಕ್ಕೆ ವಿಶ್ವವಿಖ್ಯಾತ ಜಂಬೂಸವಾರಿಗೆ ಸಿಎಂ ಚಾಲನೆ : ಅರಮನೆ ನಗರಿಯಲ್ಲಿ ಚಿನ್ನದ ಅಂಬಾರಿ ನೋಡಲು ಜನರ ಕಾತುರ

ಮೈಸೂರು : ಮೈಸೂರಿನಲ್ಲಿ ನಾಡಹಬ್ಬ ದಸರಾ ಕಳೆಗಟ್ಟಿದ್ದು, ಇಂದು ಸಂಜೆ 4.40 ಕ್ಕೆ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.   ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ಸತತ ನಾಲ್ಕನೇ ಬಾರಿಗೆ ಹೆಜ್ಜೆ ಹಾಕಲಿದ್ದಾನೆ.

ಸಿಎಂ ಸಿದ್ದರಾಮಯ್ಯ ಅವರು ಇಂದು ಸಂಜೆ 4.30-4.46 ರ ಶುಭ ಮೀನ ಲಗ್ನದಲ್ಲಿ ಕೋಟಿ ಆಂಜನೇಯ ದೇಗುಲದ ಬಳಿ ಪೂಜೆ ಸಲ್ಲಿಸದ್ದಲಿದ್ದಾರೆ. ಬಳಿಕ ವಿಶ್ವವಿಖ್ಯಾತ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.

ಅರಮನೆಯ ಬಲರಾಮ ದ್ವಾರದಲ್ಲಿ ಇಂದು ಮಧ್ಯಾಹ್ನ 1.46 ರಿಂದ 2.08 ರೊಳಗೆ ನಂದಿಧ್ವಜ ಪೂಜೆ ನೆರವೇರಲಿದೆ. ಸಂಜೆ 4.40 ರಿಂದ 5 ರವರೆಗೆ ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.  ಪೊಲೀಸರು ಜಂಬೂಸವಾರಿ ಮೆರವಣಿಗೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ .  ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 6 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಬಾರಿ ಜಂಬೂ ಸವಾರಿಯಲ್ಲಿ ಕಣ್ಮನ ಸೆಳೆಯುವ 40 ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಸಾಗಲಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...