ಮೈಸೂರು: ನಾಡಿನೆಲ್ಲೆಡೆ ನವರಾತ್ರಿ, ದಸರಾ ಮಹೋತ್ಸವದ ಸಡಗರ ಸಂಭ್ರಮ ಮನೆ ಮಾಡಿದೆ. ಅದರಲ್ಲಿಯೂ ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯಲ್ಲಿ ಇಂದು ಆಯುಧಪೂಜೆ ಸಂಭ್ರಮ.
ಅಂಬಾವಿಲಾಸ ಅರಮನೆಯಲ್ಲಿ ರಾಜ ಯದುವೀರ ಒಡೆಯರ್ ಆಯುಧಪೂಜೆ ನರವೇರಿಸಿದರು. ಅರಮನೆಯ ಖಾಜಾ ಆಯುಧಗಳು, ಕಾರುಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು.
ಇದೇ ವೇಳೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಸವಾರಿ ತೊಟ್ಟಿಗೆ ಆಗಮಿಸಿದ್ದು, ಯದುವೀರ್ ಒಡೆಯರ್ ಪೂಜೆ ನೆರವೇರಿಸಿದರು. ಇದೇ ವೇಳೆ ಫಿರಂಗಿಗಳಿಗೂ ಪೂಜೆ ಮಾಡಲಾಯಿತು.