ಮೈಸೂರು: ಕೆಲಸದ ಜಾಗದಲ್ಲಿ ಅನ್ಯಾಯವಾಗುತ್ತಿದೆ ನ್ಯಾಯ ಕೊಡಿಸಿ ಎಂದು 45 ವರ್ಷದ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತಿರುವ ಘಟನೆ ಮೈಸೂರಿನ ವರುಣಾದಲ್ಲಿ ನಡೆದಿದೆ.
ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಸಿದ್ಧನಗೌಡ, ಕೆಲಸ ಮಾಡುವ ಜಾಗದಲ್ಲಿ ತನಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ. ನ್ಯಾಯ ಕೊಡಿಸುವವರೆಗೂ ಟವರ್ ನಿಂದ ಕೆಳಗಿಳಿಯಲ್ಲ ಎಂದು ಪಟ್ಟು ಹಿಡಿದಿದ್ದಾನೆ.
ಸ್ಥಳಕ್ಕಾಗಿಮಿಸಿರುವ ಪೊಲೀಸರು ಸಿದ್ದೇಗೌಡನನ್ನು ಮನವೊಲಿಸಿ ಟವರ್ ನಿಂದ ಕೆಳಗಿಳಿಸಲು ಹರಸಾಹಸಪಟ್ಟಿದ್ದಾರೆ.