
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಗಜಪಯಣಕ್ಕೆ ಚಾಲನೆ ದೊರೆಯುವ ಮೂಲಕ ದಸರಾಗೆ ಮುನ್ನುಡಿ ಬರೆಯಲಾಗಿದ್ದು, ನಾಳೆ ಅಭಿಮನ್ಯು ನೇತೃತ್ವದಲ್ಲಿ ಗಜಪಡೆಗಳು ಮೈಸೂರು ಅರಮನೆ ತಲುಪಲಿವೆ.
ಕಾಡಿನಿಂದ ನಾಡಿಗೆ ಪಯಣ ಬೆಳೆಸಿರುವ ಗಜಪಡೆಗಳು ನಾಳೆ ಮಧ್ಯಾಹ್ನ ಮೈಸೂರು ಅರಮನೆ ತಲುಪಲಿವೆ. ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಮಧ್ಯಾಹ್ನ 12:1ರಿಂದ 12:15 ರ ಅಭಿಜಿತ್ ಲಗ್ನದಲ್ಲಿ ಆನೆಗಳಿಗೆ ವಿಶೇಷ ಪೂಜೆ ಮಾಡುವ ಮೂಲಕ ಗಜಪಡೆಗೆ ಅದ್ಧೂರಿ ಸ್ವಗತ ಕೋರಲಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಗಜಪಡೆಗಳನ್ನು ಬರಮಾಡಿಕೊಳ್ಳಲಿದ್ದಾರೆ. ನಾಳೆಯಿಂದ ಗಜಪಡೆಗಳು ಅರಮನೆಯಲ್ಲಿ ಬೀಡು ಬಿಟ್ಟು, ದಸರಾ ತಾಲೀಮು ಮಾಡಲಿವೆ.
ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯು ಸೇರಿದಂತೆ ಪ್ರತಿ ಬಾರಿಯಂತೆ ಈ ಬಾರಿಯೂ 14 ಆನೆಗಳು ಜಂಬೂಸವಾರಿಯಲ್ಲಿ ಭಾಗವಹಿಸಲಿವೆ.