ಮೈಸೂರು : ನಾಳೆ ಸಂಜೆ 6 ಗಂಟೆಯ ನಂತರ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡಿ ದೇವಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.
ಚಂದ್ರಗ್ರಹಣದ ಹಿನ್ನೆಲೆ ನಾಳೆ ಶನಿವಾರ ದೇವಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದ್ದು, ಸಂಜೆ 6 ಗಂಟೆಯ ನಂತರ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಭಾನುವಾರ ಬೆಳಗ್ಗೆ 7:30 ರಿಂದ ಎಂದಿನಂತೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ, ಭಕ್ತರು ಸಹಕರಿಸುವಂತೆ ಚಾಮುಂಡಿ ದೇವಸ್ಥಾನದ ಆಡಳಿತಾಧಿಕಾರಿ ಕೃಷ್ಣ ಪ್ರಕಟಣೆ ಹೊರಡಿಸಿದ್ದಾರೆ.