ಇಂದು ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ ಯೋಗಾಭ್ಯಾಸ ನಡೆದಿದೆ. ಯೋಗದ ಉಡುಪು ತೊಟ್ಟು ಅಭ್ಯಾಸ ಮಾಡುವುದು ಸಾಮಾನ್ಯವಾದರೆ, ಗೇಟ್ ವೇ ಆಫ್ ಇಂಡಿಯಾದಲ್ಲಿ ಮಹಾರಾಷ್ಟ್ರದ ಮಹಿಳೆಯರು ಸಾಂಪ್ರದಾಯಿಕ ನೌವರಿ ಸೀರೆಯಲ್ಲಿ ಯೋಗ ಪ್ರದರ್ಶನ ಮಾಡಿದರು.
ಈ ವಿಶೇಷ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು ವೈರಲ್ ಆಗಿದೆ. ಮಹಿಳೆಯರು ‘ಓಂ’ ಪಠಣದೊಂದಿಗೆ ಯೋಗಾಭ್ಯಾಸ ಆರಂಭಿಸಿದ್ದು ವಿವಿಧ ಆಸನಗಳನ್ನು ಸಾಂಪ್ರದಾಯಿಕ ಸೀರೆ ತೊಟ್ಟು ಮಾಡಿರೋದು ಗಮನ ಸೆಳೆದಿದೆ.
ಮಹಾರಾಷ್ಟ್ರದಲ್ಲಿ ಮಹಿಳೆಯರು ಧರಿಸುವ ಒಂಬತ್ತು ಗಜಗಳ ಸೀರೆ ಇದಾಗಿದೆ. ಒಂಬತ್ತು ಗಜಗಳಷ್ಟು ಸೀರೆಯ ಉದ್ದದಿಂದ ‘ನೌವರಿ’ ಎಂಬ ಹೆಸರು ಹುಟ್ಟಿಕೊಂಡಿತು.