ನಟ ಶಾರುಖ್‌ಗೆ OTP ಕೇಳಿದ ಅಭಿಮಾನಿ..! ಪೊಲೀಸರು ನೀಡಿದ್ದಾರೆ ಈ ಉತ್ತರ

ಬಾಲಿವುಡ್ ಬಾದ್‌ಶಾಹ್‌ ನಟ ಶಾರುಖ್‌ಖಾನ್‌ ಪಠಾಣ್ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. ಬಿಡುಗಡೆಗೂ ಮುನ್ನ ಸಿನೆಮಾ ಪಬ್ಲಿಸಿಟಿ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ನಟ ಶಾರುಖ್ ಖಾನ್‌ ತನ್ನ ಟ್ವಿಟ್ಟರ್ ಅಕೌಂಟ್‌ನಲ್ಲಿ” ಆಸ್ಕ್ ಮಿ..”(ನನಗೆ ಏನಾದರೂ ಕೇಳಿ) ಅಂತ ಸಂದೇಶವನ್ನ ಪೋಸ್ಟ್ ಮಾಡಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಅಭಿಮಾನಿಗಳು ಶಾರುಖ್‌ಗೆ ಚಿತ್ರ-ವಿಚಿತ್ರ ಅಷ್ಟೆ ತಮಾಷೆ ಪ್ರಶ್ನೆಗಳನ್ನ ಕೇಳಿದ್ದರು. ಅದಕ್ಕೆ ಖುದ್ದು ಶಾರುಖ್ ಉತ್ತರ ಕೊಟ್ಟಿದ್ದರು.

ಈ ನಡುವೆ ಓರ್ವ ಅಭಿಮಾನಿ ಕೇಳಿದ್ದ ಪ್ರಶ್ನೆಗೆ ಶಾರುಖ್ ದಂಗಾಗಿ ಹೋಗಿದ್ದರು. ಆದರೂ ಆ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು. ಶಾರುಖ್ ಕೊಟ್ಟ ಉತ್ತರ ಓದಿ ನೆಟ್ಟಿಗರು ಫುಲ್ ಖುಷ್ ಆಗಿದ್ದರು. ಅಷ್ಟೆ ಅಲ್ಲ ಮುಂಬೈ ಪೊಲೀಸ್ ಕೂಡಾ ಶಾರುಖ್ ಅಭಿಮಾನಿಗೆ ಶಾಕ್ ಆಗುವಂತ ಉತ್ತರ ಕೊಟ್ಟಿದ್ದರು.

ಅಷ್ಟಕ್ಕೂ ಆಗಿದ್ದು ಏನಂದ್ರೆ, ಶಾರುಖ್‌ಖಾನ್‌ “ಆಸ್ಕ್ ಮಿ..“ ಅನ್ನೊ ಮೆಸೇಜ್ ಓದಿ ನೆಟ್ಟಿಗರು ಸಾವಿರಾರು ಪ್ರಶ್ನೆಗಳನ್ನ ಶಾರುಖ್ ಮುಂದೆ ಇಟ್ಟಿದ್ದರು. ಅದರಲ್ಲಿ ಒಬ್ಬ ಆಸಾಮಿ “ನಿಮಗೆ ಒಂದು ಓಟಿಪಿ (One time password) ಬಂದಿರಬೇಕಲ್ಲ. ಅದು ಏನಂತ ಹೇಳ್ತಿರಾ?‘ ಅಂತ ಪ್ರಶ್ನೆಯನ್ನ ಕೇಳಿದ್ದ.

ಆ ಪ್ರಶ್ನೆ ಕೇಳಿ ಒಂದೆರಡು ಕ್ಷಣ ಆವಕ್ಕಾಗಿದ್ದಂತೂ ನಿಜ. ಆದರೂ ಅವರು ಅಭಿಮಾನಿಯನ್ನ ನಿರಾಸೆ ಮಾಡಿರಲಿಲ್ಲ. “ ನೋಡಿ, ನನ್ನ ಹೆಸರು ಎಷ್ಟು ಫೇಮಸ್ ಆಗಿದೆ ಅಂದ್ರೆ, ನನಗೆ ಯಾವುದೇ ಓಟಿಪಿ ಬರೋದಿಲ್ಲ. ನಾನು ಏನಾದ್ರೂ ಆರ್ಡರ್ ಮಾಡಿದ್ರೆ ಅದು ಡೈರೆಕ್ಟ್ ಆಗಿ ಮನೆಗೆ ತಲುಪಿರುತ್ತೆ. ನೀನು ನಿನ್ನದನ್ನ ನೋಡ್ಕೊ ಅಷ್ಟು ಸಾಕು” ಎಂದು ನಗ್ತಾ ನಗ್ತಾನೇ ವಾರ್ನಿಂಗ್ ಕೊಟ್ಟಿದ್ದರು.

ಈ ರೀತಿ ಶಾರುಖ್ ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದಾನೆ ಅನ್ನೊ ವಿಚಾರ ಮುಂಬೈ ಪೊಲೀಸ್ ಅವರಿಗೆ ಹೇಗೋ ತಲುಪಿದೆ. ಅದಕ್ಕೆ ಅವರು ಕೂಡಾ ತಕ್ಷಣವೇ, ಆ ಹುಚ್ಚು ಅಭಿಮಾನಿಗೆ ಬಿಸಿತಟ್ಟಿಸಿದ್ದರು. “ಸರ್ ಯಾರಾದರೂ ಓಟಿಪಿ ಕೇಳಿದ್ರೆ ನೀವು 100 ಅಂತ ಕೊಟ್ಟು ಬಿಡಿ. ಇದು ಮುಂಬೈ ಪೊಲೀಸ್ ಅವರ ಟೋಲ್ ಫ್ರಿ ನಂಬರ್” ಈಗ ಇದು ಸಖತ್ ವೈರಲ್ ಆಗಿದೆ. ಇದರಂತೆ ಇನ್ನೂ ಕೆಲ ತಮಾಷೆಯ ಶಾರುಖ್ ಮತ್ತು ಅಭಿಮಾನಿಗಳ ಮಾತುಕತೆಯ ಮೆಸೆಜ್‌ಗಳು ವೈರಲ್ ಆಗಿವೆ.

https://twitter.com/lamsrkian/status/1610570861307912192?ref_src=twsrc%5Etfw%7Ctwcamp%5Etweetembed%7Ctwterm%5E1611008052907630597%7Ctwgr%5E911e1dc86bec1adec29d4a8ec85b05862aef9f3f%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fmumbai-polices-response-to-fan-who-asked-shah-rukh-khan-about-otp-wins-internet-3672403

https://twitter.com/Debayanmazumde2/status/1610965972432879618?ref_src=twsrc%5Etfw%7Ctwcamp%5Etweetembed%7Ctwterm%5E1610965972432879618%7Ctwgr%5E911e1dc86bec1adec29d4a8ec85b05862aef9f3f%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fmumbai-polices-response-to-fan-who-asked-shah-rukh-khan-about-otp-wins-internet-3672403

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read