ಬಕ್ರೀದ್ ಆಚರಣೆಗೆ ಮುನ್ನ ಮುಸ್ಲಿಂ ಕುಟುಂಬವೊಂದು ಮನೆಗೆ ಎರಡು ಮೇಕೆ ತಂದ ಬಳಿಕ ಸುತ್ತಮುತ್ತಲಿನ ನಿವಾಸಿಗಳು ಹನುಮಾನ್ ಚಾಲೀಸ ಪಠಿಸಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಮುಂಬೈನ ಮೀರಾ ರೋಡ್‌ನಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿ ವರದಿಯಾಗಿದೆ.
ಸಿಸಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಮೊಹ್ಸಿನ್ ಶೇಖ್ ಎಂಬ ವ್ಯಕ್ತಿ ಲಿಫ್ಟಿಂದ ಹೊರಗೆ ಬರುತ್ತಾ ತಮ್ಮ ಜೊತೆಗೆ 2 ಮೇಕೆಗಳನ್ನು ತಮ್ಮ ಮನೆಗೆ ಸ್ಥಳಾಂತರಿಸುತ್ತಿರುವುದು ಕಂಡುಬಂದಿದೆ.
ಸುಮಾರು 200-250 ಮುಸ್ಲಿಂ ಕುಟುಂಬಗಳು ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿವೆ ಎಂದು ಮೊಹ್ಸಿನ್ ಶೇಖ್ ಹೇಳಿದ್ದಾರೆ. ರೆಸಿಡೆನ್ಶಿಯಲ್ ಸೊಸೈಟಿಯ ಬಿಲ್ಡರ್ ಪ್ರತಿ ವರ್ಷ ಮೇಕೆಗಳನ್ನು ನೋಡಿಕೊಳ್ಳಲು ನಿಗದಿಪಡಿಸಿದ ಜಾಗವನ್ನ ನೀಡುತ್ತಿದ್ದರು. ಆದರೆ ಈ ಬಾರಿ ಆ ರೀತಿ ಮಾಡಲಿಲ್ಲ. ಹೀಗಾಗಿ ನಾನು ಮೇಕೆಗಳನ್ನು ಮನೆಯೊಳಗೆ ತರಬೇಕಾಯಿತು ಎಂದಿದ್ದಾರೆ.
ಪೊಲೀಸರು ಮಧ್ಯ ಪ್ರವೇಶಿಸಿ ವಿವಾದವನ್ನು ಇತ್ಯರ್ಥಪಡಿಸಿದರು ಮತ್ತು ನಿಯಮಗಳ ಪ್ರಕಾರ ಆವರಣದೊಳಗೆ ಪ್ರಾಣಿ ಬಲಿಯನ್ನು ಅನುಮತಿಸುವುದಿಲ್ಲ ಎಂದು ಹೌಸಿಂಗ್ ಸೊಸೈಟಿಯ ಸದಸ್ಯರಿಗೆ ಭರವಸೆ ನೀಡಿದರು.
ನಿಯಮ ಉಲ್ಲಂಘಿಸಿದರೆ ಶೇಖ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ನಂತರ ಶೇಖ್ ಅವರು ಮೇಕೆಗಳನ್ನು ಹೌಸಿಂಗ್ ಸೊಸೈಟಿಯಿಂದ ಹೊರಕ್ಕೆ ಸ್ಥಳಾಂತರಿಸಿದರು.