ಮದುವೆ ಆರತಕ್ಷತೆ ವೇಳೆ ಕಳ್ಳರು ಬೀಗ ಹೊಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿರೋ ಘಟನೆ ಮುಂಬೈನಲ್ಲಿ ನಡೆದಿದೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು, 50,000 ರೂಪಾಯಿ ನಗದು ಮತ್ತು ಎರಡು ಮೊಬೈಲ್ ಫೋನ್‌ಗಳೊಂದಿಗೆ ಪರಾರಿಯಾಗಿದ್ದ ಇಬ್ಬರು ಅಪರಿಚಿತರ ವಿರುದ್ಧ ಎಂಎಚ್‌ಬಿ ಕಾಲೋನಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸೆರೆಯಾಗಿದೆ.
ಪೊಲೀಸರ ಪ್ರಕಾರ ಬೊರಿವಿಲಿ ವೆಸ್ಟ್ ನ ನ್ಯೂ ಲಿಂಕ್ ರಸ್ತೆಯಲ್ಲಿರುವ ದುರ್ಗಾ ಗಾರ್ಡನ್‌ನಲ್ಲಿ ಅಮೃತ ರಾಮದಾಸ್ ವಾರಂಕರ್ ಮತ್ತು ಸುಯಶ್ ಪ್ರಕಾಶ್ ಕೊಡಾರೆ ಅವರ ವಿವಾಹ ಮಹೋತ್ಸವದ ನಡುವೆ ಈ ಘಟನೆ ನಡೆದಿದೆ.
ವಧುವಿನ ಪೋಷಕರು ಹಣವಿದ್ದ ಲಕೋಟೆಗಳು ಮತ್ತು ಚಿನ್ನಾಭರಣಗಳನ್ನು ಮೇಕಪ್ ರೂಮ್‌ನಲ್ಲಿ ಇರಿಸಿದ್ದರು. ಊಟ ಬಡಿಸುವ ಮೊದಲು ಅವರು ಕೋಣೆಗೆ ಬೀಗ ಹಾಕಿ ಹೋಗಿದ್ದರು.
ಆರೋಪಿಗಳು ವಧುವಿನ ಪೋಷಕರನ್ನು ಹಿಂಬಾಲಿಸಿ ಕೊಠಡಿ ಬಳಿ ಅವಿತಿದ್ದರು. ಪೋಷಕರು ತೆರಳಿದಾಗ, ಆರೋಪಿಗಳಲ್ಲಿ ಒಬ್ಬ ಬಾಗಿಲಿನ ಮೇಲಿದ್ದ ಜಾಗದ ಮೂಲಕ ಹಾರಿ ರೂಂ ಪ್ರವೇಶಿಸಿದ್ದ. ಆರೋಪಿಗಳಿಬ್ಬರು ಮದುವೆಯ ಸಭಾಂಗಣದಿಂದ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಎಂಎಚ್‌ಬಿ ಕಾಲೋನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.