
ರಾಘವ್‌ರ ’ಲೆಟ್ಸ್ ವರ್ಕ್ ಇಟ್ ಔಟ್’ ಹಾಡಿಗೆ ನೃತ್ಯ ಮಾಡುತ್ತಿರುವ ಮುಂಬಯಿ ಪೊಲೀಸ್ ಪೇದೆಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ.
ಅಮೋಲ್ ಕಾಂಬ್ಳೆ ಹೆಸರಿನ ಪೇದೆಯೊಬ್ಬರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ವೆಸ್ಟ್ ಹಾಗೂ ಶಾರ್ಟ್ಸ್‌ನಲ್ಲಿರುವ ಪೇದೆ ಹಾಡಿನ ಪೆಪ್ಪಿ ಬೀಟ್ಸ್‌ಗೆ ಕುಣಿಯುತ್ತಿರುವುದನ್ನ ನೋಡಿ ನೆಟ್ಟಿಗರು ಎಂಜಾಯ್ ಮಾಡುತ್ತಿದ್ದಾರೆ.
“ಟ್ರೆಂಡಿಂಗ್ ಆಗುತ್ತಿರುವ ಕಾರಣ ಮತ್ತೊಮ್ಮೆ ಪೋಸ್ಟ್ ಮಾಡುತ್ತಿದ್ದೇನೆ,” ಎಂದು ಈ ವಿಡಿಯೋಗೆ ಅಮೋಲ್ ಕ್ಯಾಪ್ಷನ್ ಹಾಕಿದ್ದಾರೆ.