alex Certify ಬಾಂಬ್​ ಪ್ರೂಫ್​​ ಮರ್ಸಿಡೀಸ್ ಕಾರು ಖರೀದಿಸಿದ ಮುಖೇಶ್​ ಅಂಬಾನಿ : ಬೆರಗಾಗಿಸುವಂತಿದೆ ಇದರ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಂಬ್​ ಪ್ರೂಫ್​​ ಮರ್ಸಿಡೀಸ್ ಕಾರು ಖರೀದಿಸಿದ ಮುಖೇಶ್​ ಅಂಬಾನಿ : ಬೆರಗಾಗಿಸುವಂತಿದೆ ಇದರ ಬೆಲೆ…!

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿರುವ ಮುಖೇಶ್​ ಅಂಬಾನಿ ರಿಲಯನ್ಸ್​​ ಇಂಡಸ್ಟ್ರೀಸ್​ ಮಾಲೀಕತ್ವ ಹೊಂದಿರೋದು ಎಲ್ಲರಿಗೂ ತಿಳಿದಿರೋ ವಿಚಾರ. ಈ ಕಂಪನಿಯು ಸದ್ಯ 17.69 ಟ್ರಿಲಿಯನ್​ ಮಾರುಕಟ್ಟೆ ಕ್ಯಾಪ್​ ಹೊಂದಿದೆ. ಪ್ರಪಂಚದ ಪ್ರಸಿದ್ಧ ಕೋಟ್ಯಾಧಿಪತಿಗಳಲ್ಲಿ ಮುಕೇಶ್​ ಅಂಬಾನಿ ಸಹ ಒಬ್ಬರು.

ಆಕಾಶ್​ ಅಂಬಾನಿ, ಅನಂತ್​ ಅಂಬಾನಿ, ಶ್ಲೋಕಾ ಮೆಹ್ತಾ ಅಂಬಾನಿ, ಇಶಾ ಅಂಬಾನಿ ಸೇರಿದಂತೆ ಇನ್ನೂ ಅನೇಕರನ್ನು ಹೊಂದಿರುವ ಅಂಬಾನಿ ಕುಟುಂಬವು ತಮ್ಮ ಐಷಾರಾಮಿ ಜೀವನದ ಮೂಲಕವೇ ಆಗಾಗ ಸುದ್ದಿಯಲ್ಲಿ ಇರುತ್ತೆ.

ಅಂಬಾನಿ ಕುಟುಂಬಸ್ಥರು ಬೃಹತ್​ ಎಸ್​ಯುವಿ ಹಾಗೂ ದುಬಾರಿ ಕಾರುಗಳಲ್ಲಿ ಪ್ರಯಾಣಿಸೋದು ಎಲ್ಲರಿಗೂ ತಿಳಿದಿರುವ ವಿಚಾರ. ಮುಖೇಶ್​ ಅಂಬಾನಿ ಮರ್ಸಿಡೀಸ್​ ಬೆಂಜ್​​ 5600 ಗಾರ್ಡ್​ ಬುಲೆಟ್​ ಪ್ರೂಫ್​​ ಸೆಡಾನ್​ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದು 10 ಕೋಟಿ ರೂಪಾಯಿಗಿಂತಲೂ ಹೆಚ್ಚು ಮೌಲ್ಯವನ್ನು ಹೊಂದಿತ್ತು. ಇದೀಗ ಮುಕೇಶ್​ ಅಂಬಾನಿ ತಮ್ಮ ಕಾರನ್ನು ಬದಲಾಯಿಸಿದ್ದಾರೆ.

ಮುಕೇಶ್​ ಅಂಬಾನಿ ಇದೀಗ Mercedes-Benz S680 ಗಾರ್ಡ್ ಐಷಾರಾಮಿ ಸೆಡಾನ್ ಕಾರನ್ನು ಹೊಂದಿದ್ದಾರೆ. ಈ ಬುಲೆಟ್​ ಪ್ರೂಫ್​​ ಕಾರು ಹೊರಗಿನಿಂದ Mercedes-Benz S-ಕ್ಲಾಸ್‌ನಂತೆ ಕಾಣುತ್ತದೆ. ಇದು ಸಾಮಾನ್ಯ ಸೆಡಾನ್​ಗಿಂತ 2 ಟನ್​ಗಳಷ್ಟು ಹೆಚ್ಚು ಭಾರವನ್ನು ಹೊಂದಿದೆ. ಇದು ಬುಲೆಟ್​ ಪ್ರೂಫ್​ ಹಾಗೂ ಬ್ಲಾಸ್ಟ್​ ಪ್ರೂಫ್​ ಆಗಿದೆ.

ಈ ದುಬಾರಿ ಕಾರಿನಲ್ಲಿ ಬಲವರ್ಧಿತ ಟೈರ್​ಗಳನ್ನು ಕಾಣಬಹುದಾಗಿದೆ. ಇದು 6.0 ಲೀಟರ್​​​ ವಿ 12 ಎಂಜಿನ್​​​ ಚಾಲಿತವಾಗಿದ್ದು 612 Ps ಮತ್ತು 830 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮುಕೇಶ್​ ಅಂಬಾನಿ ಕುಟುಂಬದ ಬೆಂಗಾವಲು ಪಡೆಯ ರೋಲ್ಸ್​ರಾಯ್ಸ್​ ಕಲ್ಲಿನನ್​ ಎಎಸ್ಯುವಿ, ಲಂಬೋರ್ಗಿನಿ ಉರಸ್​, ಮರ್ಸಿಡಿಸ್​​ ಎಎಂಜಿ ಜಿ 63, ಲ್ಯಾಂಡ್​ ರೋವರ್​​ ರೇಂಜ್​ ರೋವರ್​​ ಆಟೋಬಯೋಗ್ರಫಿ, ಮರ್ಸಿಡೀಸ್​ ಮೇಬ್ಯಾಕ್​ ಎಸ್​ 580 ಸೇರಿದಂತೆ ಇನ್ನು ಅನೇಕ ದುಬಾರಿ ಕಾರುಗಳನ್ನು ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...