ಬೆಂಗಳೂರು : ಜುಲೈ 29 ರ ಇಂದು ಮುಸ್ಲಿಂ ಭಾಂದವರ ಮೊಹರಂ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ,ಮಧ್ಯಾಹ್ನ 01-00 ಗಂಟೆಯಿಂದ ಸಂಜೆ 04-30 ಗಂಟೆಯವರೆಗೆ ಬೆಂಗಳೂರಿನ ಈ ಕೆಳಕಂಡಂತೆ ಸಂಚಾರ ಮಾರ್ಗಬದಲಾವಣೆ ಮಾಡಲಾಗಿದೆ.
- ಬ್ರಿಗೇಡ್ ರಸ್ತೆ ಮೂಲಕ ಹೊಸೂರು ರಸ್ತೆ ಕಡೆಗೆ ವೆಲ್ಲಾರಾ ಜಂಕ್ಷನ್ (ಶೂಲೆ ವೃತ್ತ) ಮುಖಾಂತರತೆರಳುವ ಸವಾರರು
1- ರಿಆ್ಯಂಡ್ ರಸ್ತೆಯ ಮೂಲಕ ರೀನಿಯಸ್ ಕ್ರಾಸ್, ನಂಜಪ್ಪ ವೃತ್ತ, ಲಾಂಗ್ ಮೋರ್ಡ್ ರಸ್ತೆ, ಸಿಎಂಪಿ ಜಂಕ್ಷನ್ ಮೂಲಕ ಸಂಚರಿಸುವುದು.
- ಹೊಸೂರು ರಸ್ತೆ ಆಡುಗೋಡಿ ಕಡೆಯಿಂದ ಬರುವ ಸವಾರರು
– ಸಿಮೆಂಟ್ರಿ ಕ್ರಾಸ್, ಬರ್ಚ್ ಸ್ಟ್ರೀಟ್, ಲಾಂಗ್ ಮೋರ್ಡ್ ರಸ್ತೆ, ನಂಜಪ್ಪ ವೃತ್ತ, ರೀನಿಯಸ್ ಸ್ಟೇಟ್ ಮೂಲಕ ರಿಬ್ಯಂಡ್ ರಸ್ತೆಗೆ ಬಂದು ಮುಂದಕ್ಕೆ ಸಂಚರಿಸುವುದು
ಹೊಸೂರು ರಸ್ತೆ ಕಡೆಯಿಂದ ಬರುವ ಭಾರಿ ವಾಹನ ಸವಾರರು
ಆಡುಗೋಡಿ ಜಂಕ್ಷನ್, ಮೈಕೋ ಜಂಕ್ಷನ್, 8ನೇ ಮೈನ್, ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆ,ಸಿದ್ಧಯ್ಯ ರಸ್ತೆಗೆ ಬಂದು ಮುಂದಕ್ಕೆ ಸಂಚರಿಸುವುದು.
ಈ ಮೇಲ್ದಂಡಂತ ಮಾಡಲಾದ ಮಾರ್ಪಾಡುಗಳಿಗೆ ಸಾರ್ವಜನಿಕರು ಸಹಕರಿಸಲು ಕೋರಿದೆ.