ಮುಡಾದ ಮತ್ತೊಂದು ಹಗರಣ ಬಯಲಿಗೆ: ಸುಳ್ಳು ದಾಖಲೆ ಸೃಷ್ಟಿಸಿ ಅಧಿಕಾರಿಗಳಿಂದ ಪ್ರಾಧಿಕಾರಕ್ಕೆ ಕೊಟ್ಯಂತರ ರೂಪಾಯಿ ವಂಚನೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದ ಮತ್ತೊಂದು ಹಗರಣ ಬಯಲಾಗಿದೆ. ಅಧಿಕಾರಿಗಳೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪ್ರಾಧಿಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ವಂಚನೆ ಪ್ರಕರಣದಲ್ಲಿ ಪ್ರಾಧಿಕಾರದ ಹೊರಗುತ್ತಿಗೆ ನೌಕರರು, ಅಧಿಕರಿಗಳು, ಬ್ಯಾಂಕ್ ಸಿಬ್ಬಂದಿಗಳು ಶಾಮೀಲಾಗಿದ್ದಾರೆ ಎಂದು ಮೈಸೂರು ಉಳಿಸಿ ಹೋರಾಟಗಾರರ ವೇದಿಕೆ ಆರೋಪಿಸಿದೆ.

ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಶಾಖೆಯ ಕೆಲ ಸಿಬ್ಬಂದಿಗಳು ಹಾಗೂ ಕೆಲ ಅಧಿಕಾರಿಗಳು ಮುಡಾ ಕಂದಾಯ ಇಲಾಖೆಯ ವಿವಿಧ ಸೇವೆಗಳಿಗಾಗಿ 93 ಗ್ರಾಹಕರಿಂದ ಹಣ ಪಡೆದು, ಪ್ರಾಧಿಕಾರದ ಖಾತೆಗೆ ಜಮೆ ಮಾಡಿಲ್ಲ. ಪ್ರಾಧಿಕಾರದ ಖಾತೆಗೆ ಹಣ ಜಮೆ ಆಗಿರುವ ರೀತಿಯಲ್ಲಿ ಸುಳ್ಳು ಬ್ಯಾಂಕ್ ಚಲನ್ ಗಳನ್ನು ಸೃಷ್ಟಿಸಿ ಪ್ರಾಧಿಕಾರಕ್ಕೆ ಕೋಟ್ಯಂತರ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

93 ಜನರು ಹಣ ನೀಡಿರುವ ಬಗ್ಗೆ ಚಲನ್ ನಮ್ಮ ಬಳಿ ಇದೆ. ಆದರೆ ಆದರೆ ಹಣ ನಮ್ಮ ಖಾತೆಗೆ ಜಮೆ ಆಗಿಲ್ಲ ಹೀಗಾಗಿ ಕೂಡಲೇ ನಮ್ಮ ಖಾತೆಗೆ ಹಣ ಜಮೆ ಮಡಿ ಎಂದು ಮುಡಾ ಹಣಕಾಸು ವಿಭಾಗ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಪತ್ರ ಬರೆದಿದೆ.

ಮುಡಾ ಪತ್ರಕ್ಕೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಆಫ್ ಬರೋಡ ನೀವು ಕೇಳಿರುವ 93 ಚಲನ್ ಗಳಲ್ಲಿ 92 ಚಲನ್ ಹಣ ನಮ್ಮ ಬ್ಯಾಂಕ್ ಖಾತೆಗೆ ಬಂದಿಲ್ಲ ಎಂದು ತಿಳಿಸಿದೆ. ಹಣ ಕಟ್ಟಿದ್ದಾರೆ ಎಂಬ ಬ್ಯಾಂಕ್ ಸೀಲ್ ಇದೆ. ಆದರೆ ಖಾತೆಗೆ ಮಾತ್ರ ಹಣ ಜಮೆ ಆಗಿಲ್ಲ. ಇದರಿಂದ ಹಣಕಾಸು ವಿಭಗದ ಅಧಿಕರಿಗಳು ಅಚ್ಚರಿಗೊಂಡಿದ್ದು, ಪ್ರಾಥಮಿಕ ತನಿಖೆ ನಡೆಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read