ಮಹಿಳೆಯರ ಒಳ ಉಡುಪು ಕದಿಯುತ್ತಿದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿ ಚಪ್ಪಲಿ ಹಾರ ಹಾಕಿ ಮೂತ್ರ ಕುಡಿಸಿದ ಗ್ರಾಮಸ್ಥರು

ಛಿಂದ್ವಾರಾ(ಮಧ್ಯಪ್ರದೇಶ): ಕಿರುಕುಳ ಮತ್ತು ವಾಮಾಚಾರದ ಶಂಕೆಯಿಂದ ಯುವಕನೊಬ್ಬನನ್ನು ಮಹಿಳೆಯರು ಥಳಿಸಿ, ಶೂಗಳಿಂದ ಹಾರ ಹಾಕಿ ಗ್ರಾಮದ ಸುತ್ತಲೂ ಮೆರವಣಿಗೆ ಮಾಡಿದ ಘಟನೆ ಛಿಂದವಾರದಲ್ಲಿ ನಡೆದಿದೆ.

ಗ್ರಾಮಸ್ಥರು ಬಲವಂತವಾಗಿ ಮೂತ್ರ ಕುಡಿಸಿದ್ದರು ಎಂದು ಆತನ ಕುಟುಂಬದವರು ಹೇಳಿದ್ದು, ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ವಾಮಾಚಾರದ ಉದ್ದೇಶದಿಂದ ಮಹಿಳೆಯರ ಒಳ ಉಡುಪು ಮತ್ತು ಬಟ್ಟೆಗಳನ್ನು ಕದಿಯುತ್ತಾರೆ ಎಂದು ಗ್ರಾಮಸ್ಥರು ದೂರಿದ್ದರು.

ಛಿಂದ್ವಾರಾ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಆದರ್ಶ ಗ್ರಾಮದಲ್ಲಿ ಸೆಪ್ಟೆಂಬರ್ 4 ರಂದು ಈ ಘಟನೆ ವರದಿಯಾಗಿದೆ. ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ತನಿಖೆಗಾಗಿ ತಂಡವನ್ನು ರಚಿಸಿದರು.

ಸೆಪ್ಟೆಂಬರ್ 3ರಂದು ರಕ್ಷಾ ಬಂಧನ ನಿಮಿತ್ತ ತನ್ನ ಮಗ ಅತ್ತೆಯ ಮನೆಗೆ ಹೋಗಿದ್ದ ಎಂದು ಬುಡಕಟ್ಟು ಯುವಕನ ತಂದೆ ತಿಳಿಸಿದ್ದಾರೆ. ಅವರು ಒಬ್ಬರೇ ಇದ್ದಾಗ ಗ್ರಾಮಸ್ಥರು ಅವರ ಮನೆಗೆ ನುಗ್ಗಿ ಮಗನ ಬಗ್ಗೆ ವಿಚಾರಿಸಲು ಆರಂಭಿಸಿದರು. ಮಗ ಮನೆಯಲ್ಲಿಲ್ಲ ಎಂದು ಹೇಳಿದಾಗ ಗ್ರಾಮಸ್ಥರು ಮನೆಯೊಳಗೆ ಇಣುಕಿ ನೋಡಿ ವಾಪಸ್ಸಾದರು.

ಸೆಪ್ಟೆಂಬರ್ 4 ರಂದು, ಯುವಕ ಹಿಂತಿರುಗಿದಾಗ, ಗ್ರಾಮಸ್ಥರು ಆತನಿಗೆ ಅಮಾನುಷವಾಗಿ ಥಳಿಸಿ, ಶೂಗಳಿಂದ ಹಾರ ಹಾಕಿ ಗ್ರಾಮದಾದ್ಯಂತ ಮೆರವಣಿಗೆ ನಡೆಸಿದರು.

ಗ್ರಾಮದ ಮಹಿಳೆಯರು ಮತ್ತು ಪುರುಷರು ಮೊದಲು ತನ್ನ ಸಹೋದರನಿಗೆ ಥಳಿಸಿ, ನಂತರ ಶೂ ಮತ್ತು ಚಪ್ಪಲಿಯಿಂದ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದರು ಎಂದು ಯುವಕನ ಸಹೋದರಿ ಹೇಳಿದ್ದಾರೆ. ತುಂಬಿದ ಮೂತ್ರವನ್ನು ಕುಡಿಸುವಂತೆ ಮಹಿಳೆಯರು ಆತನನ್ನು ಒತ್ತಾಯಿಸಿದರು. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಯುವಕ ವಾಮಾಚಾರ ಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಕಳೆದ ಎರಡ್ಮೂರು ತಿಂಗಳಿನಿಂದ ಗ್ರಾಮದಲ್ಲಿ ಬಟ್ಟೆ ಕಳವು ಆಗುತ್ತಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read