ರಾಜ್ಯ ರಾಜಕಾರಣಕ್ಕೆ ಸುಮಲತಾ ಅಂಬರೀಶ್: ಬಿಜೆಪಿ, ಕಾಂಗ್ರೆಸ್ ನಿಂದ ಆಹ್ವಾನ; ಜನಾಭಿಪ್ರಾಯ ಪಡೆದು ತೀರ್ಮಾನ

ಮಂಡ್ಯ: ರಾಜ್ಯ ರಾಜಕಾರಣಕ್ಕೆ ಬರುವಂತೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದಿಂದ ನನಗೆ ಆಹ್ವಾನ ಬಂದಿದ್ದು, ಜನಾಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಎಷ್ಟು ದಿನ ಇದೆ ಎಂಬುದಕ್ಕಿಂತ ಎಷ್ಟು ಅನುಕೂಲಕರವಾದ ವಾತಾವರಣ ಇದೆ ಎನ್ನುವುದು ಮುಖ್ಯವಾಗಿದೆ. ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಮಾತನಾಡಲು ಇನ್ನು ಸಮಯ ಬಂದಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ನನಗೆ ಆಹ್ವಾನವಿದ್ದು, ಆ ಪಕ್ಷಗಳ ನಾಯಕರು ನನ್ನ ಜೊತೆ ಮಾತನಾಡಿದ್ದಾರೆ. ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕೆಂದು ನಾನಿನ್ನು ನಿರ್ಧಾರ ಮಾಡಿಲ್ಲ. ಜನರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಯಾವ ಪಕ್ಷ ಸೇರಬೇಕು ಎಂಬುದರ ಬಗ್ಗೆ ಜನರನ್ನು ಕೇಳಿಯೇ ತೀರ್ಮಾನ ಕೈಗೊಳ್ಳುತ್ತೇನೆ. ನಾನು ರಾಜಕೀಯಕ್ಕೆ ಬಂದಿದ್ದೆ ಆಕಸ್ಮಿಕ. ಬೇರೆ ರಾಜಕೀಯ ಪಕ್ಷ ಸೇರುವ, ಇಲ್ಲವೇ ಸ್ವತಂತ್ರವಾಗಿ ಉಳಿಯುವ ಬಗ್ಗೆ ನಾನು ತೀರ್ಮಾನ ಕೈಗೊಂಡಿಲ್ಲ. ಜನ ಅಭಿಪ್ರಾಯ ಪಡೆದು ಎಲ್ಲರ ಸಮ್ಮುಖದಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read