ಮೈಸೂರು : ಸಂಸದ ‘ಪ್ರತಾಪ್ ಸಿಂಹ’ ದೇಶದ್ರೋಹಿ ಎಂದು ಮೈಸೂರಲ್ಲಿ ವಿವಾದಿತ ಫ್ಲೆಕ್ಸ್ ಅಳವಡಿಕೆ ಮಾಡಿದ್ದು, ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಸಂಸತ್ತಿನ ಹೊಗೆ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಕೋರರಿಗೆ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಸೂರಿನಲ್ಲಿ ವಿವಾದಾತ್ಮಕ ಫಲಕ ಅಳವಡಿಸಲಾಗಿದೆ.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮೈಸೂರಿನ ಮಹಾರಾಜ ವೃತ್ತದ ಬಳಿ ಫ್ಲೆಕ್ಸ್ ಅಳವಡಿಸಿದ್ದು,, ಸಂಸದ ಪ್ರತಾಪ್ ಸಿಂಹ ದೇಶದ್ರೋಹಿ ಎಂದು ಬರೆಯಲಾಗಿದೆ. ಫ್ಲೆಕ್ಸ್ನಲ್ಲಿ ಬಾಂಬ್ ಹಾಗೂ ಪಾಸ್ ಹಿಡಿದು ನಿಂತಿರುವ ಫೋಟೋ ಹಾಕಲಾಗಿದೆ.
ಸಂಸದ ಸ್ಥಾನದಿಂದ ಪ್ರತಾಪ್ ಸಿಂಹ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಸಹಿ ಸಂಗ್ರಹ ಚಳವಳಿ ನಡೆಸಲಾಗುತ್ತಿದೆ. ಸಂಸತ್ ಭವನಕ್ಕೆ ನುಗ್ಗಲು ದುಷ್ಕರ್ಮಿಗಳಿಗೆ ಪ್ರತಾಪ್ ಸಿಂಹ ಪಾಸ್ ನೀಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ. ಕೂಡಲೇ ವಿಷಯ ತಿಳಿದ ಪಾಲಿಕೆ ಸಿಬ್ಬಂದಿಗಳು ಫ್ಲೆಕ್ಸ್ ತೆರವುಗೊಳಿಸಲು ಮುಂದಾಗಿದ್ದು, ಈ ವೇಳೆ ಹಿಂದುಳಿದ ಜಾಗೃತ ವೇದಿಕೆಯ ಸದಸ್ಯರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.