ಭೋಪಾಲ್: ‘ಮುಖ್ಯಮಂತ್ರಿ ಕಿಸಾನ್ ಕಲ್ಯಾಣ ಯೋಜನೆ’ ಅಡಿಯಲ್ಲಿ ರೈತರಿಗೆ ವರ್ಷಕ್ಕೆ 6,000 ರೂ. ನೀಡುವುದಾಗಿ ಮಧ್ಯಪ್ರದೇಶ ಸಿಎಂ ಸಿಎಂ ಶಿವರಾಜ್ ಚೌಹಾಣ್ ಘೋಷಿಸಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಟ್ವೀಟ್ ಮಾಡಿ, ನನ್ನ ರೈತ ಬಂಧುಗಳೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ ಅಡಿಯಲ್ಲಿ ರೈತ ಸಹೋದರರಿಗೆ ವರ್ಷಕ್ಕೆ 6 ಸಾವಿರ ನೀಡುತ್ತಿದ್ದಾರೆ. ಇದೀಗ ‘ಮುಖ್ಯಮಂತ್ರಿ ಕಿಸಾನ್ ಕಲ್ಯಾಣ ಯೋಜನೆ’ಯಡಿ ರಾಜ್ಯದ ಅನ್ನದಾತರಿಗೂ 6 ಸಾವಿರ ನೀಡಲಾಗುವುದು ಎಂದು ತಿಳಿಸಿದ್ದಾರೆ.