ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದ ಸಮಾರಂಭದಲ್ಲಿ ಡಿಜೆ ಸಂಗೀತವನ್ನು ಜೋರಾಗಿ ನುಡಿಸಲು ಪ್ರಾರಂಭಿಸಿದ ನಂತರ ಮುಸ್ಲಿಂ ಧರ್ಮಗುರುಗಳು ನಿಕಾಹ್ (ಮದುವೆ) ಶಾಸ್ತ್ರ ಮಾಡುವುದನ್ನು ನಿರಾಕರಿಸಿರೋ ಘಟನೆ ನಡೆದಿದೆ.
ಕುಟುಂಬದವರು ತಮ್ಮ ನಡವಳಿಕೆಗಾಗಿ ಕ್ಷಮೆಯಾಚಿಸಿ , ವಿವಾಹವನ್ನು ಶಾಸ್ತ್ರೋಕ್ತವಾಗಿ ನಡೆಸಲು ಮನವೊಲಿಸಿದ ನಂತರವೇ ಧರ್ಮಗುರುಗಳು ಮದುವೆ ಮಾಡಲು ಒಪ್ಪಿಕೊಂಡರು.
ಈ ಬಗ್ಗೆ ಧರ್ಮಗುರುವನ್ನು ಕೇಳಿದಾಗ, “ನಮ್ಮ ಸಮಾಜದಲ್ಲಿ ಅನವಶ್ಯಕ ಖರ್ಚುಗಳಿಗೆ ನಿಷೇಧವಿದೆ, ಮದುವೆಯ ಸಮಯದಲ್ಲಿ ಡಿಜೆ ಸಂಗೀತ ಅಥವಾ ಜನರು ನೃತ್ಯ ಮಾಡುವುದಿಲ್ಲ. ಏಕೆಂದರೆ ಈ ವಿಷಯಗಳು ಅಸಭ್ಯವಾಗಿವೆ” ಎಂದು ಹೇಳಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬ ಸಂದೇಶವನ್ನು ನೀಡುವ ಸಲುವಾಗಿ ಮುಸ್ಲಿಂ ಸಮಾಜದಲ್ಲಿ ಡಿಜೆ ನುಡಿಸುವಿಕೆ ಮತ್ತು ನೃತ್ಯ ಎರಡನ್ನೂ ನಿಷೇಧಿಸಲಾಗಿದೆ. ಸಮುದಾಯದ ಜನರ ಒಪ್ಪಿಗೆ ಮೇರೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಧರ್ಮಗುರುಗಳು ತಿಳಿಸಿದ್ದಾರೆ.
ವಿವಾಹ ಸಮಾರಂಭಗಳನ್ನು ಸರಳವಾಗಿ ನಡೆಸಲು ಸಮುದಾಯಗಳಿಗೆ ಮನವರಿಕೆ ಮಾಡಲು ಧರ್ಮಗುರುಗಳ ಸಹಕಾರ ಕೋರಿ ಮುಸ್ಲಿಂ ಸಂಘಟನೆಯೊಂದು ಈ ಹಿಂದೆ ಹೇಳಿಕೆ ನೀಡಿತ್ತು.
ಮದುವೆ ಕಾರ್ಯಕ್ರಮಗಳಿಗೆ ಹೆಚ್ಚು ಹಣ ಖರ್ಚು ಮಾಡುವುದನ್ನು ವಿರೋಧಿಸುವುದನ್ನು ಸಂಸ್ಥೆ ಮುಂದುವರಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.