alex Certify ‘ಗೃಹಲಕ್ಷ್ಮಿ’ ಹಣ ಬಂದಿದೆಯೇ ಎಂದು ಚೆಕ್ ಮಾಡಲು ಬ್ಯಾಂಕ್ ಮುಂದೆ ಕ್ಯೂ ನಿಂತ 600 ಕ್ಕೂ ಹೆಚ್ಚು ಯಜಮಾನಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೃಹಲಕ್ಷ್ಮಿ’ ಹಣ ಬಂದಿದೆಯೇ ಎಂದು ಚೆಕ್ ಮಾಡಲು ಬ್ಯಾಂಕ್ ಮುಂದೆ ಕ್ಯೂ ನಿಂತ 600 ಕ್ಕೂ ಹೆಚ್ಚು ಯಜಮಾನಿಯರು

ಚಿಕ್ಕಮಗಳೂರು : ‘ಗೃಹಲಕ್ಷ್ಮಿ’ ಹಣ 2000  ಬಂದಿದೆಯೇ ಎಂದು ಚೆಕ್ ಮಾಡಲು 600 ಕ್ಕೂ ಹೆಚ್ಚು ಯಜಮಾನಿಯರು ಬ್ಯಾಂಕ್ ಮುಂದೆ ಕ್ಯೂ ನಿಂತ ಘಟನೆ ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯಲ್ಲಿರುವ ಐಡಿಬಿಐ ಬ್ಯಾಂಕ್ ಬಳಿ ನಡೆದಿದೆ.

ಸುಮಾರು 600 ಕ್ಕೂ ಹೆಚ್ಚು ಮಹಿಳೆಯರು ಕೈಯಲ್ಲಿ ಪಾಸ್ ಬುಕ್ ಹಿಡಿದು ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದಾರೆ. ಖಾತೆಗೆ ಹಣ ಬಂದಿದೆಯೋ ಇಲ್ಲವೋ ಅಂತ ಚೆಕ್ ಮಾಡಲು ಮಹಿಳೆಯರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತ ಮಹಿಳೆಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಬ್ಯಾಂಕ್ ಸಿಬ್ಬಂದಿಗಳು ಕೂಡ ಎಲ್ಲರ ಪಾಸ್ ಬುಕ್ ಎಂಟ್ರಿ ಮಾಡುವಷ್ಟರಲ್ಲಿ ಹೈರಾಣಾದರು.

ರಾಜ್ಯ ಸರ್ಕಾರ ಮನೆ ಯಜಮಾನಿಯರ ಖಾತೆಗೆ 2000 ರೂ ಹಣ ಜಮಾ ಮಾಡುತ್ತಿದ್ದು, ಇನ್ನೂ ಕೆಲವರ ಖಾತೆಗೆ ಹಣ ಬಂದಿಲ್ಲ. ಕೆಲವರ ಖಾತೆಗೆ ಹಣ ಜಮಾ ಆಗಿದೆ. ಈ ಹಿನ್ನೆಲೆ ಮಹಿಳೆಯರು ಪಾಸ್ ಬುಕ್ ಹಿಡಿದು ಬ್ಯಾಂಕ್ ಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...