
ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ನವೀನ್ ನಾರಾಯಣಘಟ್ಟ ನಿರ್ದೇಶನದ ಮೂರನೇ ಕೃಷ್ಣಪ್ಪ ಸಿನಿಮಾದ ಲಿರಿಕಲ್ ಸಾಂಗ್ ನಿನ್ನೆ ಆನಂದ್ ಆಡಿಯೋ youtube ಚಾನೆಲ್ ಅಲ್ಲಿ ಬಿಡುಗಡೆ ಮಾಡಲಾಗಿದೆ. ‘ಹೊಂಗನಸೆ’ ಎಂಬ ಈ ಹಾಡಿಗೆ ಸುರಭಿ ಭಾರದ್ವಾಜ್ ಧ್ವನಿಯಾಗಿದ್ದು, ಆನಂದ್ ರಾಜವಿಕ್ರಂ ಸಂಗೀತ ಸಂಯೋಜನೆ ನೀಡಿದ್ದಾರೆ. ಸುಪ್ರೀತ್ ಶರ್ಮಾ ಅವರ ಸಾಹಿತ್ಯವಿದೆ.
ಈ ಚಿತ್ರವನ್ನು ರೆಡ್ ಡ್ರ್ಯಾಗನ್ ಫಿಲಂಸ್ ಬ್ಯಾನರ್ ನಡಿ ರವಿಶಂಕರ್ ಮತ್ತು ಮೋಹನ್ ರೆಡ್ಡಿ ನಿರ್ಮಾಣ ಮಾಡಿದ್ದು, ಸಂಪತ್ ಮೈತ್ರಿಯ, ರಂಗಾಯಣ ರಘು, ಉಗ್ರ ಮಂಜು, ಶ್ರೀಪ್ರಿಯ, ತುಕಾಲಿ ಸಂತೋಷ್ ತೆರೆ ಹಂಚಿಕೊಂಡಿದ್ದಾರೆ. ಶ್ರೀಕಾಂತ್ ಅವರ ಸಂಕಲನವಿದ್ದು, ಯೋಗಿ ಸಾಹಿತ್ಯವಿದೆ.