ನಿನ್ನೆಯ ಪಂದ್ಯದಲ್ಲಿ ಈ ದಾಖಲೆ ಬರೆದ ಮೊಹಮ್ಮದ್ ನಬಿ

Asia Cup 2023 Mohammad Nabi vs Sri Lanka Afghanistan ODI fastest fifty - Asia Cup: लाहौर में आया मोहम्मद नबी का तूफान, अफगानिस्तान के लिए सबसे तेज फिफ्टी जड़ा | Jansatta

ನಿನ್ನೆ ನಡೆದ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವಣ ರೋಚಕ ಪಂದ್ಯದಲ್ಲಿ ಶ್ರೀಲಂಕಾ ಕೇವಲ 2 ರನ್ ಗಳಿಂದ ಜಯಗಳಿಸಿದೆ. ಅಫ್ಘಾನಿಸ್ತಾನ ಸೂಪರ್ ಫೋರ್ ಗೆ ಎಂಟ್ರಿ ಕೊಡಲು 37.1 ಓವರ್ ಗಳಲ್ಲೇ 292 ರನ್ ಗಳಿಸಬೇಕಿತ್ತು. ಅಂದುಕೊಂಡಂತೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅಫ್ಘಾನಿಸ್ತಾನ ತಂಡ ಕೊನೆಯ ಹಂತದಲ್ಲಿ ಎಡವಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ಆಲ್ ರೌಂಡರ್ ಮೊಹಮ್ಮದ್ ನಬಿ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಶ್ರೀಲಂಕಾ ಬೌಲರ್ಗಳ ಬೆವರಿಳಿಸಿದ್ದಾರೆ.

ಅಫ್ಘಾನಿಸ್ತಾನ ತಂಡದಲ್ಲಿ ಅತಿ ವೇಗವಾಗಿ ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಮೊಹಮ್ಮದ್ ನಬಿ ಇದೀಗ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುಂಚೆ ರಶೀದ್ ಖಾನ್ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರೆ ಮುಜೀಬ್ ಉರ್ ರೆಹಮಾನ್ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಅಫ್ಘಾನಿಸ್ತಾನ ನಿನ್ನೆ ಪಂದ್ಯ ಸೋತಿದ್ದರೂ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ ಅಫ್ಘಾನಿಸ್ತಾನ ತಂಡದ ಆಟಗಾರರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ದೊರೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read