ಬೇಸಿಗೆಯ ಬಿಸಿ ತಡೆಯಲಾರದೆ ಮಜ್ಜಿಗೆ ನೀರು ಕುಡಿಯುತ್ತಿದ್ದೀರಾ, ಇದರಿಂದ ಶೀತ ಕಾಡುತ್ತಿದೆಯೇ, ಹಾಗಿದ್ದರೆ ಇಲ್ಲಿ ಕೇಳಿ. ಮಜ್ಜಿಗೆಗೆ ಈರುಳ್ಳಿ ಸೇರಿಸಿ ಕುಡಿಯುವುದರಿಂದ ಬಾಯಾರಿಕೆಯೂ ಕಡಿಮೆಯಾಗುತ್ತದೆ, ಶೀತದ ಸಮಸ್ಯೆಯೂ ಕಾಡುವುದಿಲ್ಲ.
ಮಜ್ಜಿಗೆ ಹಾಗೂ ಈರುಳ್ಳಿ ಈ ಎರಡು ಕೂಡ ಉತ್ತಮ ಆರೋಗ್ಯಕರ ಗುಣಗಳನ್ನು ಹೊಂದಿದೆ. ಅಜೀರ್ಣ ಸಮಸ್ಯೆ ಇದ್ದರೆ ಮಜ್ಜಿಗೆಯಲ್ಲಿ ಈರುಳ್ಳಿ ಹಾಕಿಕೊಂಡು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ದೇಹದಲ್ಲಿನ ಉಷ್ಣದ ಸಮಸ್ಯೆಯನ್ನು ನಿವಾರಿಸಲು ಮಜ್ಜಿಗೆ ಉಪಕಾರಿ.
ಮಜ್ಜಿಗೆಯಲ್ಲಿ ಈರುಳ್ಳಿಯೊಂದಿಗೆ ಕೊತ್ತಂಬರಿ ಸೊಪ್ಪನ್ನು ಬೆರೆಸಿ ಕುಡಿಯುವುದರಿಂದ ಹೊಟ್ಟೆನೋವು ಸಮಸ್ಯೆ ನಿವಾರಿಸಿಕೊಳ್ಳಬಹುದು. ಬೇಸಿಗೆಯಲ್ಲಿ ಬಿಸಿಲಿನಿಂದ ಬಂದಾಕ್ಷಣ ಇದನ್ನು ಕುಡಿಯುವುದರಿಂದ ಬೇಗೆಯೂ ಕಡಿಮೆಯಾಗುತ್ತದೆ, ದೇಹಕ್ಕೂ ಒಳ್ಳೆಯದು. ಅಂಗಡಿಯಲ್ಲಿ ಸಿಗುವ ತಂಪು ಪಾನೀಯಕ್ಕಿಂತ, ಫ್ರೀಜರ್ನಲ್ಲಿಟ್ಟ ಜ್ಯೂಸ್ ಗಿಂತ ಇದು ಹತ್ತು ಪಟ್ಟು ಒಳ್ಳೆಯದು.