Breaking : ನಿಧಿ ಆಸೆಗಾಗಿ ದೇವಾಲಯದಲ್ಲಿನ ಶಿವಲಿಂಗವನ್ನೇ ಕಿತ್ತೆಸೆದ ದುಷ್ಕರ್ಮಿಗಳು…!

ಕಲಬುರಗಿ : ನಿಧಿ ಆಸೆಗಾಗಿ ದೇಗುಲದಲ್ಲಿ (Temple ಶಿವಲಿಂಗವನ್ನೇ ದುಷ್ಕರ್ಮಿಗಳು ಕಿತ್ತೆಸೆದಿರುವ ಘಟನೆ ಕಲಬುರಗಿ ಜಿಲ್ಲೆಯ (Kalaburagi district) ಚಿತ್ತಾಪುರ ತಾಲೂಕಿನ (Chittapur taluk) ಎನ್. ಸೂಗೂರಿನಲ್ಲಿ ನಡೆದಿದೆ.

ಕಳೆದ ರಾತ್ರಿ ಎನ್. ಸೂಗೂರು ಗ್ರಾಮದಲ್ಲಿ ದುಷ್ಕರ್ಮಿಗಳು ಮಲ್ಲಿಕಾರ್ಜುನ ದೇವಾಲಯದಲ್ಲಿ ಶಿವಲಿಂಗವನ್ನೇ ಕಿತ್ತೆಸೆದಿರುವ ಘಟನೆ ನಡೆದಿದೆ. ದೇವಸ್ಥಾನದಲ್ಲಿರುವ ಶಿವಲಿಂಗದ ಕೆಳಗಡೆ ನಿಧಿ ಎಂದು ದುಷ್ಕರ್ಮಿಗಳು ಶಿವಲಿಂಗವನ್ನು ಕಿತ್ತೆಸೆದು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ.

ಭಕ್ತರ ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ನೋಡಿದಾಗ ಶಿವಲಿಂಗವನ್ನು ಕಿತ್ತೆಸೆದಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read