alex Certify ಸಾರ್ವಜನಿಕ ಹಣ ದುರ್ಬಳಕೆ, ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕರ್ತವ್ಯ ಲೋಪ: ಪಿಡಿಒ ಅಮಾನತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಹಣ ದುರ್ಬಳಕೆ, ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕರ್ತವ್ಯ ಲೋಪ: ಪಿಡಿಒ ಅಮಾನತು

ಚಿತ್ರದುರ್ಗ: ಗ್ರಾಮ ಪಂಚಾಯತಿಗೆ ಬರಬೇಕಾದ ಸಾರ್ವಜನಿಕ ಹಣದ ದುರುಪಯೋಗ, ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಭರಮಸಾಗರ ಗ್ರಾಮ ಪಂಚಾಯತಿ ಪಿಡಿಒ ಶ್ರೀದೇವಿ ಅವರ ವಿರುದ್ದ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.

ಭರಮಸಾಗರ ಗ್ರಾ.ಪಂ.ನಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀದೇವಿ ಅವರು ಕಾನೂನು ಬಾಹಿರವಾಗಿ ಸಾರ್ವಜನಿಕ ವಿರೋಧಿ, ಸರ್ವಾಧಿಕಾರಿ ಧೋರಣೆಯಿಂದ ಕರ್ತವ್ಯ ನಿರ್ವಹಣೆ, ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಬೆಲೆ ಕೊಡದೆ, ಗೌರವ ನೀಡದೆ, ಕಚೇರಿಯ ನೌಕರರನ್ನಾಗಲಿ, ಸಿಬ್ಬಂದಿಯನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಆಡಳಿತ ನಡೆಸುತ್ತಿದ್ದಾರೆ.

ಗ್ರಾ.ಪಂ. ನ ವಿವಿಧ ಕೆಲಸಗಳಿಗೆ ಬರುವ ಸಾರ್ವಜನಿಕರಿಂದ ರಶೀದಿ ಹಣ ಪಾವತಿಸಿಕೊಂಡು, ಗ್ರಾ.ಪಂ. ಖಾತೆಗೆ ಜಮಾ ಮಾಡದೆ ಹಣ ದುರುಪಯೋಗ ಮಾಡಿರುತ್ತಾರೆಂದು, ಅಲ್ಲದೆ ಕೆಲವು ಇ-ಸ್ವತ್ತುಗಳ ವಿತರಣೆಗೆ ಪಾವತಿಸಲಾದ ಹಣಕ್ಕೆ ರಸೀದಿ ಹಾಕದೆ ಹಣವನ್ನು ಸ್ವಂತಕ್ಕೆ ಉಪಯೋಗಿಸಿರುತ್ತಾರೆ ಎಂಬುದಾಗಿ ಗ್ರಾ.ಪಂ. ಅಧ್ಯಕ್ಷರು, ಗ್ರಾ.ಪಂ. ಸದಸ್ಯರು ನೀಡಿರುವ ದೂರುಗಳ ಕುರಿತು ಜಿ.ಪಂ. ಮುಖ್ಯ ಲೆಕ್ಕಾಧಿಕಾರಿಯವರು ವಿಶೇಷ ಲೆಕ್ಕ ತನಿಖೆ ಕೈಗೊಂಡು ತನಿಖಾ ವರದಿಯನ್ನು ಸಲ್ಲಿಸಿದ್ದರು. 96 ಸಾವಿರ ರೂ. ಗಳಿಗೆ ಸಾರ್ವಜನಿಕರಿಂದ ಶುಲ್ಕ ಪಡೆದು ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಮ್ಯಾನ್ಯುಯಲ್‌ನಲ್ಲಿ ಜನರಲ್ ಲೈಸೆನ್ಸ್ ನೀಡಿರುವುದು, ಸೇರಿದಂತೆ ಗ್ರಾ.ಪಂ. ಗೆ ಬರಬೇಕಾದ ಸಾರ್ವಜನಿಕ ಹಣದ ದುರುಪಯೋಗವಾಗಿರಬಹುದೆಂಬ ಅಂಶ ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಅವರು ವರದಿ ಸಲ್ಲಿಸಿದ್ದರು.

ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನೀಡಿದ ನೋಟಿಸ್‌ ಗೆ, ಪಿಡಿಒ ಶ್ರೀದೇವಿ ಅವರು ನೀಡಿರುವ ಸಮಜಾಯಿಷಿಯು ಅಸಮಂಜಸವಾಗಿರುವುದರಿಂದ ನಿಯಮಾನುಸಾರ ಶ್ರೀದೇವಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...