Shocking News: ಕ್ರಿಕೆಟ್ ಆಡುವಾಗಲೇ ಕುಸಿದುಬಿದ್ದು ಯುವಕ ಸಾವು

ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯ ವೇಳೆ ಬ್ಯಾಟ್ಸ್ ಮನ್ ಆಟದ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ದುರಂತ ಘಟನೆ ಮಹಾರಾಷ್ಟ್ರದ ಮೀರಾ ರೋಡ್‌ನಲ್ಲಿ ನಡೆದಿದೆ.‌

ಘಟನೆಯ ವಿಡಿಯೋದಲ್ಲಿರುವಂತೆ ಬಾಲ್ ಎದುರಿಸಿ ಬ್ಯಾಟಿಂಗ್ ಮಾಡಿದ ನಂತರ ಮತ್ತೊಂದು ಎಸೆತಕ್ಕಾಗಿ ಕಾಯುತ್ತಿರುವಾಗ, ಬ್ಯಾಟ್ಸ್ ಮನ್ ಇದ್ದಕ್ಕಿದ್ದಂತೆ ನೆಲದ ಮೇಲೆ ಕುಸಿಯುತ್ತಾನೆ.

ಇತರ ಆಟಗಾರರು ಮತ್ತು ಅಂಪೈರ್ ಅವನಿಗೆ ಸಹಾಯ ಮಾಡಲು ಧಾವಿಸುತ್ತಾರೆ. ತಕ್ಷಣ ಬ್ಯಾಟ್ಸ್ ಮನ್ ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸುತ್ತಾರೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಆದರೆ ಬಿಸಿಗಾಳಿಯಿಂದ ಜನ ಸಾವನ್ನಪ್ಪುತ್ತಿರುವ ವರದಿಗಳಾಗ್ತಿರುವುದರಿಂದ, ಬ್ಯಾಟ್ಸ್ ಮನ್ ಸಾವಿಗೆ ಬಿಸಿಗಾಳಿ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಇತ್ತೀಚಿಗೆ ಯುವಜನತೆಯಲ್ಲಿ ಹೃದಯಾಘಾತಗಳೂ ಹೆಚ್ಚಾಗುತ್ತಿದ್ದು ಮತ್ತೊಂದು ಕಾರಣವೂ ಇರಬಹುದೆನ್ನಲಾಗಿದೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read