ಟೆಹ್ರಾನ್: ಇಸ್ರೇಲ್ -ಹಮಾಸ್ ನಡುವೆ ಕಳೆದ 9 ತಿಂಗಳಿಂದ ನಡೆಯುತ್ತಿರುವ ಯುದ್ಧ ಪೂರ್ಣಗೊಳ್ಳುವ ಮೊದಲೇ ಮಧ್ಯ ಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಕಾರ್ಮೋಡ ಕವಿದಿದೆ.
ಇರಾನ್ ಬೆಂಬಲಿತ ಸೇನಾಪಡೆ ಹೆಜ್ಬೊಲ್ಲಾದ ಕಮಾಂಡರ್ ಫೌದ್ ಶುಕ್ರ್ ನನ್ನು ಇಸ್ರೇಲ್ ರಕ್ಷಣಾ ಪಡೆ ನಡೆಸಿದ ವಾಯು ದಾಳಿಯಲ್ಲಿ ಮೃತಪಟ್ಟ ಬೆನ್ನಲ್ಲೇ ಇಸ್ರೇಲ್ ವಿರುದ್ಧ ಪ್ರತಿಕಾರಕ್ಕೆ ಇರಾನ್ ಹವಣಿಸುತ್ತಿದೆ. ಯಾವುದೇ ಸಂದರ್ಭದಲ್ಲಿ ಯುದ್ಧ ಘೋಷಣೆ ಮಾಡುವ ಸಂಭವ ಇದೆ.
ಲೆಬನಾನ್ ರಾಜಧಾನಿ ಬೈರುತ್ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿ ಮಧ್ಯ ಪ್ರಾಚ್ಯ ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸಿದೆ. ತನ್ನ ಭೂಪ್ರದೇಶದ ಒಳಗೆ ಹೆಜ್ಬೊಲ್ಲಾ ಕಮಾಂಡರ್ ಫೌದ್ ಶುಕ್ರ್ ನನ್ನು ಹತ್ಯೆ ಮಾಡಿರುವುದು ಇರಾನ್ ಸರ್ಕಾರವನ್ನು ಕೆರಳಿಸಿದ್ದು, ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಹೆಜ್ಬೊಲ್ಲಾ ಪಡೆಯ ಬೆಂಬಲದೊಂದಿಗೆ ಇಸ್ರೇಲ್ ಮೇಲೆ ದಾಳಿಗೆ ಸಿದ್ಧತೆ ಮಾಡಿಕೊಂಡಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಏರುಪೇರಾಗುವ ಸಂಭವವಿದೆ.