ನ್ಯೂಯಾರ್ಕ್: ತಂತ್ರಜ್ಞಾನ ಕಂಪನಿಗಳು ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲ ಕಂಪನಿ ಮೆಟಾ ದೊಡ್ಡಮಟ್ಟದಲ್ಲಿಯೇ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ರಿಯಾಲಿಟಿ ಲ್ಯಾಬ್ ಗಳಲ್ಲಿ ಮೆಟಾ ಉದ್ಯೋಗ ಕಡಿತ ಮಾಡುತ್ತಿದೆ. ಕಂಪನಿಯ ಕೆಲವೊಂದು ತಂಡಗಳ ಪುನರ್ ರಚನೆ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಂಪನಿಯ ದೀರ್ಘಾವಧಿಯ ಕಾರ್ಯತಂತ್ರ ಯೋಜನೆ, ಗುರಿ ಮತ್ತು ಆಯಾ ಸ್ಥಳಕ್ಕೆ ಸಂಬಂಧಿಸಿದ ಯೋಜನೆಗಳಿಗೆ ತಕ್ಕಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಮೆಟಾ ಕಂಪನಿಯು ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ದೊಡ್ಡಮಟ್ಟದಲ್ಲಿ ಉದ್ಯೋಗ ಕಡಿತಗೊಳಿಸಿತ್ತು. 2022 ರಲ್ಲಿ 11 ಸಾವಿರ, 2023 ರಲ್ಲಿ 10 ಸಾವಿರದಷ್ಟು ಉದ್ಯೋಗ ಕಡಿತ ಮಾಡಲಾಗಿತ್ತು.