alex Certify ಬಿಡುಗಡೆಯಾಗಿದೆ ಹೊಸ Mercedes-Benz GLC, ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ಸಂಪೂರ್ಣ ವಿವರ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾಗಿದೆ ಹೊಸ Mercedes-Benz GLC, ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ಸಂಪೂರ್ಣ ವಿವರ!

Mercedes-Benz ಭಾರತದಲ್ಲಿ ಹೊಸ ಜನರೇಶನ್‌ನ GLC ಕಾರನ್ನು ಬಿಡುಗಡೆ ಮಾಡಿದೆ. ಇದು ಮರ್ಸಿಡಿಸ್‌ ಕಂಪನಿಯ ಅತ್ಯಂತ ಜನಪ್ರಿಯ ಮಾಡೆಲ್‌ಗಳಲ್ಲಿ ಒಂದಾಗಿದೆ. ಆದರೆ ಕೆಲ ತಿಂಗಳುಗಳ ಹಿಂದಷ್ಟೆ ಇವುಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮರ್ಸಿಡಿಸ್,‌ ಅದನ್ನು ಎರಡು ರೂಪಾಂತರಗಳೊಂದಿಗೆ ಹೊಸ ಅವತಾರದಲ್ಲಿ ಹೊರತಂದಿದೆ. GLC 300 4 ಮ್ಯಾಟಿಕ್ ಮತ್ತು GLC 220d 4 ಮ್ಯಾಟಿಕ್.

ಮೊದಲ ರೂಪಾಂತರದ ಬೆಲೆ 73.50 ಲಕ್ಷ ರೂಪಾಯಿ ಆಗಿದ್ರೆ, ಎರಡನೇ ರೂಪಾಂತರದ ಬೆಲೆ 74.50 ಲಕ್ಷ ಇದೆ. ಈ ಐಷಾರಾಮಿ ಮಧ್ಯಮ ಗಾತ್ರದ SUV ಗಾಗಿ ಬುಕಿಂಗ್ ಕೂಡ ಪ್ರಾರಂಭವಾಗಿದೆ. 1.50 ಲಕ್ಷ ರೂಪಾಯಿಗಳ ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್‌ ಮಾಡಬಹುದು. ಮರ್ಸಿಡಿಸ್ ತನ್ನ ಬಾಹ್ಯ ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿದೆ. ಸಿ-ಕ್ಲಾಸ್‌ನಿಂದ ಪ್ರೇರಿತವಾದ, ಹೊಸ ಗಾರ್ಡ್ ಗ್ರಿಲ್ ಸ್ವಲ್ಪ ಅಗಲವಾಗಿದೆ. ಒಂದೇ ದಪ್ಪನೆಯ ಸಮತಲ ಸ್ಲ್ಯಾಟ್ ಅನ್ನು ಒಳಗೊಂಡಿದೆ.

ಏರ್ ಡ್ಯಾಮ್ ಪ್ರದೇಶ ಮತ್ತು ಕಿಟಕಿಗಳ ಸುತ್ತಲೂ ಕ್ರೋಮ್ ಅಂಶಗಳನ್ನು ನೀಡಲಾಗಿದೆ. GLCಯ ಸಿಲೂಯೆಟ್ ಮೊದಲಿನಂತೆಯೇ ಇದೆ. ಇದು 5-ಸ್ಪೋಕ್ 19-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಪಡೆಯುತ್ತದೆ. GLC ಈಗ 60 mmನಷ್ಟು ಹೆಚ್ಚು ಉದ್ದವಾಗಿದೆ, ವೀಲ್ಬೇಸ್ ಕೂಡ 15 mm ಹೆಚ್ಚಾಗಿದೆ. ಈ ಕಾರು ಗ್ರಾಹಕರಿಗೆ ಸಂಪೂರ್ಣ ಐಷಾರಾಮಿ ಅನುಭವ ನೀಡಲಿದೆ. ಇದು 11.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.

ಬಯೋಮೆಟ್ರಿಕ್ ದೃಢೀಕರಣ, ಧ್ವನಿ ಆಜ್ಞೆಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾಗಳೊಂದಿಗೆ ಬರುತ್ತದೆ. ಕಾರು 15-ಸ್ಪೀಕರ್ ಬರ್ಮೆಸ್ಟರ್ ಆಡಿಯೊ ಸಿಸ್ಟಮ್, ವಾಯ್ಸ್‌ ಕಮಾಂಡ್‌, ಪನೋರಮಿಕ್ ಸನ್‌ರೂಫ್, ಮಲ್ಟಿ-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು 64-ಕಲರ್ ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ.

ಸಕ್ರಿಯ ಬ್ರೇಕ್ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳು ಕೂಡ ಈ ಕಾರಿನಲ್ಲಿವೆ. GLC 300 2.0-ಲೀಟರ್, 4-ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಆದರೆ GLC 220d 2.0-ಲೀಟರ್, ಇನ್‌ಲೈನ್ 4-ಸಿಲಿಂಡರ್, ಟರ್ಬೊ-ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...