ಭಾರತದಲ್ಲಿ ಅಂತಾರಾಷ್ಟ್ರೀಯ ಉದ್ಯಮ ನಡೆಸುವ ಅನೇಕ ಕೋಟ್ಯಾಧಿಪತಿಗಳು ಇದ್ದಾರೆ. ಅನೇಕರು ಸಾಗರೋತ್ತರದಲ್ಲಿಯೂ ತಮ್ಮ ಉದ್ಯಮವನ್ನು ಯಶಸ್ವಿಯಾಗಿ ನಡೆಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಉದ್ಯಮಿಗಳಲ್ಲಿ ವಿವೇಕ್ ಚಂದ್ ಸೆಹಗಲ್ ಕೂಡ ಒಬ್ಬರು.
ಸೆಹಗಲ್ ಆಸ್ಟ್ರೇಲಿಯಾದಲ್ಲಿ ವಾಸಿಸುವ ಅತ್ಯಂತ ಶ್ರೀಮಂತ ಭಾರತೀಯ ಎನಿಸಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ಕಡೆಗಳಲ್ಲಿ ಸೆಹಗಲ್ ಸ್ವಂತ ಉದ್ಯಮ ಹೊಂದಿದ್ದಾರೆ. ಸೆಹಗಲ್ 105. 5 ಶತಕೋಟಿ ಅಮೆರಿಕನ್ ಡಾಲರ್ಗಿಂತಲೂ ಅಧಿಕ ಆದಾಯ ಹೊಂದಿದ್ದಾರೆ. ಭಾರತದ ರೂಪಾಯಿ ಮೌಲ್ಯದ ಪ್ರಕಾರ ಸೆಹಗಲ್ ಆಸ್ತಿ ಸರಿಸುಮಾರು 87,404 ಕೋಟಿ ರೂಪಾಯಿ ಅಗಿದೆ.
ಸೆಹಗಲ್ ಕಂಪನಿಯ ಹೆಸರು ಮದರ್ಸನ್ ಎಂದಾಗಿದೆ. ವಿವೇಕ್ ಸೆಹಗಲ್ ತಮ್ಮ ತಾಯಿ ದಿವಂಗತ ಸ್ವರಣ್ ಲತಾ ಸೆಹಗಲ್ರೊಂದಿಗೆ ಈ ಕಂಪನಿ ಕಟ್ಟಿದ್ದರು ಎನ್ನಲಾಗಿದೆ. ಬೆಳ್ಳಿ ವ್ಯಾಪಾರದಿಂದ ಆರಂಭಗೊಂಡ ಈ ಉದ್ಯಮವು ಇಂದು ದೊಡ್ಡ ಕಂಪನಿಯಾಗಿ ಬೆಳೆದಿದೆ ಹಾಗೂ ಆಟೋ ಉದ್ಯಮದಲ್ಲಿಯೂ ಸಿಂಹಪಾಲನ್ನು ಪಡೆದುಕೊಂಡಿದೆ.
ಸೆಹಗಲ್ ತಾತ ಕೂಡ ಯಶಸ್ವಿ ಆಭರಣ ವ್ಯಾಪಾರಿಯಾಗಿದ್ದರು. ಕೇವಲ 18 ವರ್ಷ ಪ್ರಾಯದಲ್ಲಿ ಸೆಹಗಲ್ ಒಂದು ಕೆಜಿ ಬೆಳ್ಳಿಯನ್ನು ಒಂದು ರೂಪಾಯಿಗೆ ಮಾರಾಟ ಮಾಡುವ ಮೂಲಕ ಬೆಳ್ಳಿ ವ್ಯಾಪಾರ ಆರಂಭಿಸಿದರು. 1970ರ ದಶಕದ ಆರಂಭದಲ್ಲಿ ತಿಂಗಳಿಗೆ 2500 ರೂಪಾಯಿ ಗಳಿಸುತ್ತಿದ್ದರು. ಬೆಳ್ಳಿ ವ್ಯಾಪಾರ ಹಾಗೂ ಹೂಡಿಕೆ ಉದ್ಯಮದಲ್ಲಿ ಯಶಸ್ಸು ಕಾಣುವ ಮೂಲಕ ಸೆಹಗಲ್ ಯಶಸ್ವಿ ಉದ್ಯಮಿ ಎನಿಸಿದ್ದಾರೆ.