ರಫೀರೊ ಡೊ ಅಲೆಂಟೆಜೊ (Rafeiro do Alentejo) ಎಂಬ ಪೋರ್ಚುಗೀಸ್ ತಳಿಯ ಬಾಬಿ ಎಂಬ ಈ ನಾಯಿಗೆ ಸದ್ಯ 30 ವರ್ಷ ವಯಸ್ಸಾಗಿದ್ದು, ಇದು ವಿಶ್ವದ ಅತ್ಯಂತ ವಯಸ್ಕ ನಾಯಿ ಎಂಬ ಕಾರಣಕ್ಕೆ ಗಿನ್ನಿಸ್ ರೆಕಾರ್ಡ್ಸ್ ಪಟ್ಟಿಗೆ ಸೇರಿದೆ. ಸ್ಪೈಕ್ ಎಂಬ ಹೆಸರಿನ ಮತ್ತೊಂದು ನಾಯಿಯನ್ನು ವಿಶ್ವದ ಅತಿ ಹಿರಿಯ ನಾಯಿ ಎಂದು ಘೋಷಿಸಿದ ಕೇವಲ ಎರಡು ವಾರಗಳ ನಂತರ ಪೋರ್ಚುಗಲ್‌ನ ಈ ನಾಯಿ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ 12ರಿಂದ 14 ವರ್ಷಗಳ ಕಾಲವಷ್ಟೇ ಬದುಕಿರುವ ನಾಯಿ, 30 ವರ್ಷವಾದರೂ ಜೀವಂತ ಇರುವುದಕ್ಕೆ ದಾಖಲೆ ಎನಿಸಿಕೊಂಡಿದೆ.
ಗಿನ್ನೆಸ್ ವಿಶ್ವ ದಾಖಲೆಗಳ ಅಧಿಕೃತ ವೆಬ್‌ಸೈಟ್ ಪ್ರಕಾರ ಸರಾಸರಿ 12 ರಿಂದ 14 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಅಂದರೆ ಬೋಬಿ ಈಗಾಗಲೇ ತನ್ನ ಸಹವರ್ತಿ ರಾಫೀರೊ ಡೊ ಅಲೆಂಟೆಜೊ ನಾಯಿಗಳಿಗಿಂತ ಎರಡು ಪಟ್ಟು ಹೆಚ್ಚು ಬದುಕಿದೆ.
ಫೆಬ್ರವರಿ 1 ರಂತೆ, ಬೋಬಿಗೆ 30 ವರ್ಷ ಮತ್ತು 266 ದಿನಗಳು. ಈ ಜಾತಿಯ ನಾಯಿಗಳು ಜಾನುವಾರು ರಕ್ಷಕ ತಳಿಯಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೊಸ ದಾಖಲೆ ಹೊಂದಿರುವವರ ವಿಡಿಯೋ ಹಂಚಿಕೊಳ್ಳಲಾಗಿದೆ.
https://www.youtube.com/watch?v=SIwcB56x2ek&embeds_euri=https%3A%2F%2Fwww.news18.com%2F&feature=emb_logo