
ಹಳ್ಳಿ ಪ್ರತಿಭೆಗಳು ಬೇಕಾದಷ್ಟು ಇವೆ. ಆದರೆ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಸಾಮಾಜಿಕ ಜಾಲತಾಣದಿಂದಾಗಿ ಬೆಳಕಿಗೆ ಬರುತ್ತಿವೆ. ಅಂಥದ್ದೇ ಒಂದು ಪ್ರತಿಭೆ ಅಮರಜೀತ್ ಜೈಕರ್. ತಮ್ಮ ಸೊಗಸಾದ ಸ್ವರ ಮಾಧುರ್ಯದಿಂದ ಇವರು ಎಲ್ಲರನ್ನು ಸೆಳೆಯುತ್ತಿದ್ದು, ಇವರ ದನಿಗೆ ನಟ ಸೋನು ಸೂದ್ ಕೂಡ ಮನಸೋತಿದ್ದಾರೆ..
ಬಿಹಾರದ ಹಳ್ಳಿಯೊಂದರ ಅಮರಜೀತ್ ಜೈಕರ್ ಸುಮಧುರ ಕಂಠದಿಂದ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. 2004 ರಲ್ಲಿ ಬಿಡುಗಡೆಯಾದ ಮಸ್ತಿ ಸಿನಿಮಾದ ಆನಂದ್ ರಾಜ್ ಆನಂದ್ ಸಂಯೋಜಿಸಿದ ʼದಿಲ್ ದೇ ದಿಯಾ ಹೈʼ ಹಾಡನ್ನು ಬಹಳ ಮಾಧುರ್ಯ ಪೂರ್ಣವಾಗಿ ಹಾಡಿದ್ದು, ಇವರ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ನಟ ಸೋನು ಸೂದ್ ಕೂಡ ಈ ತರುಣನ ಹಾಡಿಗೆ ಮನ ಸೋತಿದ್ದು, ಏಕ್ ಬಿಹಾರಿ ಸೌ ಪೇ ಭಾರಿ ಎಂದು ಆತನನ್ನು ಶ್ಲಾಘಿಸಿದ್ದಾರೆ. ಅಮರ್‌ಜೀತ್ ಅವರ ಧ್ವನಿಯಿಂದ ಹಿಡಿದು ಅವರ ಸ್ವರ ಮತ್ತು ರಾಗ ಎಲ್ಲವೂ ಈ ವಿಡಿಯೋದಲ್ಲಿ ಪರಿಪೂರ್ಣವಾಗಿದೆ. ಸೋನು ಸೂದ್ ಟ್ವಿಟ್‌ಗೆ ಪ್ರತಿಕ್ರಿಯಿಸಿರುವ ಜೈಕರ್ ಲವ್ ಯೂ ಸರ್ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಸಾವಿರಾರು ಜನ ಸೋಶಿಯಲ್ ಮೀಡಿಯಾ ಬಳಕೆದಾರರು ಕೂಡ ಈತನ ಪ್ರತಿಭೆ ಮೆಚ್ಚಿ ಹೊಗಳಿದ್ದಾರೆ.
ಅಮರ್‌ಜೀತ್ ತುಂಬು ಮನಸ್ಸಿನಿಂದ ಈ ಹಾಡನ್ನು ಹಾಡಿದ್ದು, ಅವರ ಹಿಂದೆ ಇಬ್ಬರು ಮಕ್ಕಳು ಆಟವಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಜೊತೆಗೆ ಹಿಂಭಾಗದಲ್ಲಿ ಹಸಿರಿನಿಂದ ತುಂಬಿದ ಹೊಲವಿರುವುದು ಕಾಣುತ್ತದೆ.