ಮಾಧ್ಯಮ ದೊರೆ ರೂಪರ್ಟ್ ಮುರ್ಡೋಕ್ ಗುರುವಾರ ಫಾಕ್ಸ್ ಕಾರ್ಪ್ ಮತ್ತು ನ್ಯೂಸ್ ಕಾರ್ಪ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಈ ಮೂಲಕ 7 ದಶಕಗಳಿಗೂ ಹೆಚ್ಚು ಅವಧಿಯ ವೃತ್ತಿಜೀವನವನ್ನು ಕೊನೆಗೊಳಿಸಿದರು.
ಅವರ ಮಗ ಲಾಚ್ಲಾನ್ ಮುರ್ಡೋಕ್, ನ್ಯೂಸ್ ಕಾರ್ಪ್‌ನ ಏಕೈಕ ಅಧ್ಯಕ್ಷರಾಗುತ್ತಾರೆ ಮತ್ತು ಫಾಕ್ಸ್‌ನ ಅಧ್ಯಕ್ಷ ಮತ್ತು ಸಿಇಒ ಆಗಿ ಮುಂದುವರಿಯುತ್ತಾರೆ. ಈ ಬದಲಾವಣೆ ಮುರ್ಡೋಕ್ ಕುಟುಂಬದೊಳಗೆ ಉತ್ತರಾಧಿಕಾರದ ಪ್ರಶ್ನೆಗಳನ್ನು ಕೊನೆಗೊಳಿಸಿದೆ. 92 ವರ್ಷದ ಆಸ್ಟ್ರೇಲಿಯನ್ ಮೀಡಿಯಾ ಮ್ಯಾಗ್ನೇಟ್, ಈಗ ಎರಡೂ ಕಂಪನಿಗಳ ಅಧ್ಯಕ್ಷ ಎಮೆರಿಟಸ್ ಆಗಿ ನೇಮಕಗೊಂಡಿದ್ದಾರೆ.
ಅವರು ಚೇರ್ಮನ್ ಎಮೆರಿಟಸ್ ಆಗಿ ಸೇವೆ ಸಲ್ಲಿಸಲು ನಾವು ಕೃತಜ್ಞರಾಗಿರುತ್ತೇವೆ. ಅವರು ಎರಡೂ ಕಂಪನಿಗಳಿಗೆ ಮೌಲ್ಯಯುತ ಸಲಹೆಯನ್ನು ನೀಡುವುದನ್ನು ಮುಂದುವರಿಸುತ್ತಾರೆ ಎಂದು ತಿಳಿದಿದೆ ಎಂದು ಮುರ್ಡೋಕ್ ಕೆಳಗಿಳಿದ ನಂತರ ಹೇಳಿಕೆಯಲ್ಲಿ ಲಾಚ್ಲಾನ್ ಮುರ್ಡೋಕ್ ಹೇಳಿದರು.
ಮುರ್ಡೋಕ್ ಅವರು ನೌಕರರಿಗೆ ಬರೆದ ಪತ್ರದಲ್ಲಿ ಸಮುದಾಯದ ಸಕ್ರಿಯ ಸದಸ್ಯರಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ.