ಫೆ. 1 ರಿಂದ ಮಾರುತಿ ಕಾರುಗಳ ಬೆಲೆ ಏರಿಕೆ: ಯಾವ ʼಮಾಡೆಲ್‌ʼ ಗೆ ಎಷ್ಷು ಹೆಚ್ಚಳ ? ಇಲ್ಲಿದೆ ವಿವರ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ತನ್ನ ಎಲ್ಲಾ ವಾಹನಗಳ ಬೆಲೆಯನ್ನು ಫೆಬ್ರವರಿ 1ರಿಂದ ಏರಿಸಲಿದೆ ಎಂದು ಘೋಷಿಸಿದೆ. ಇನ್‌ಪುಟ್ ಮತ್ತು ಕಾರ್ಯಾಚರಣಾ ವೆಚ್ಚ ಹೆಚ್ಚಾದ ಕಾರಣ, ಕಂಪನಿಯು ಕಾರು ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಎಂಎಸ್‌ಐಎಲ್ ಗುರುವಾರದಂದು ನಿಯಂತ್ರಕ ದಾಖಲೆಯಲ್ಲಿ ತಿಳಿಸಿದೆ.

“ಕಂಪನಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಗ್ರಾಹಕರ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಬದ್ಧವಾಗಿದ್ದರೂ, ಹೆಚ್ಚಿದ ವೆಚ್ಚದ ಒಂದು ಭಾಗವನ್ನು ಮಾರುಕಟ್ಟೆಗೆ ವರ್ಗಾಯಿಸುವಂತೆ ನಾವು ನಿರ್ಬಂಧಿತರಾಗಿದ್ದೇವೆ” ಎಂದು ಇದು ಹೇಳಿದೆ. ಕಂಪನಿಯ ಹ್ಯಾಚ್‌ಬ್ಯಾಕ್ ಸೆಲೆರಿಯೊದ ಎಕ್ಸ್‌-ಶೋರೂಮ್ ಬೆಲೆ 32,500 ರೂಪಾಯಿಗಳವರೆಗೆ ಹೆಚ್ಚಾಗಲಿದೆ, ಆದರೆ ಪ್ರೀಮಿಯಂ ಮಾದರಿ ಇನ್ವಿಕ್ಟೋದ ಬೆಲೆ 30,000 ರೂಪಾಯಿಗಳವರೆಗೆ ಹೆಚ್ಚಾಗಲಿದೆ.

ಪಾಪ್ಯುಲರ್ ಮಾಡೆಲ್ ವ್ಯಾಗನ್-ಆರ್ ಬೆಲೆ 15,000 ರೂಪಾಯಿಗಳವರೆಗೆ ಹೆಚ್ಚಾಗಲಿದೆ, ಸ್ವಿಫ್ಟ್‌ನ ಬೆಲೆ 5,000 ರೂಪಾಯಿಗಳವರೆಗೆ ಹೆಚ್ಚಾಗಲಿದೆ. ಎಸ್‌ಯುವಿ ಬ್ರೆಜ್ಜಾ ಮತ್ತು ಗ್ರಾಂಡ್ ವಿಟಾರಾ ಬೆಲೆಗಳಲ್ಲಿ ಹೆಚ್ಚಳವಾಗಲಿದೆ.

ಪ್ರೀಮಿಯಂ ಕಾಂಪ್ಯಾಕ್ಟ್ ಮಾಡೆಲ್ ಬ್ಯಾಲೆನೊದ ಬೆಲೆ 9,000 ರೂಪಾಯಿಗಳವರೆಗೆ, ಕಾಂಪ್ಯಾಕ್ಟ್ ಎಸ್‌ಯುವಿ ಫ್ರಾಂಕ್ಸ್‌ನ ಬೆಲೆ 5,500 ರೂಪಾಯಿಗಳವರೆಗೆ ಮತ್ತು ಕಾಂಪ್ಯಾಕ್ಟ್ ಸೆಡಾನ್ ಡಿಸೈರ್‌ನ ಬೆಲೆ 10,000 ರೂಪಾಯಿಗಳವರೆಗೆ ಹೆಚ್ಚಾಗಲಿದೆ ಎಂದು ಎಂಎಸ್‌ಐಎಲ್ ಹೇಳಿದೆ. ಜಿಮ್ನಿ ಮತ್ತು ಸಿಯಾಜ್‌ನಂತಹ ಕಡಿಮೆ ಮಾರಾಟವಾಗುವ ಮಾದರಿಗಳ ಬೆಲೆ ಪ್ರತಿಯೊಂದಕ್ಕೂ 1,500 ರೂಪಾಯಿಗಳಷ್ಟು ಹೆಚ್ಚಾಗಲಿದೆ.

ಎಂಎಸ್‌ಐಎಲ್‌ನ ಬೆಲೆ ಏರಿಕೆ, ವಿಶೇಷವಾಗಿ ಎಂಟ್ರಿ-ಲೆವೆಲ್ ಹ್ಯಾಚ್‌ಬ್ಯಾಕ್‌ಗಳ ಮಾರಾಟ ಕುಂಠಿತಗೊಂಡಿರುವ ಸಮಯದಲ್ಲಿ ಬಂದಿದೆ. ಟೈಮ್ಸ್ ಆಫ್ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ, ಎಂಎಸ್‌ಐಎಲ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ, ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳು ಯಾವುದೇ ಸಮಸ್ಯೆ ಎದುರಿಸುತ್ತಿಲ್ಲವಾದರೂ, ಎಂಟ್ರಿ-ಲೆವೆಲ್ ಕಾರುಗಳು ಅನೇಕ ಗ್ರಾಹಕರಿಗೆ ಕೈಗೆಟುಕದಂತಾಗಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read