ಪೋಷಕರ ಒತ್ತಾಯಕ್ಕೆ ಮದ್ವೆಯಾಗ್ತಿದ್ದೇನೆಂದು ಕಣ್ಣೀರಿಟ್ಟ ವಧು…!

The bride identified to be Yan, who resides in the Guizhou province located in Southwestern China. (Credits: Reuters)

ಚೀನಾದಲ್ಲಿ 20 ವರ್ಷದ ವಧುವಿನ ವಿಡಿಯೋ ವೈರಲ್ ಆಗಿದ್ದು, ಬಹಳ ಸದ್ದು ಮಾಡುತ್ತಿದೆ. ಆಕೆ ತನ್ನ ಮದುವೆಯ ದಿನ ತಾನು ಈತನನ್ನು ಪ್ರೀತಿಸುತ್ತಿಲ್ಲ ಮತ್ತು ತನ್ನ ವಯಸ್ಸಾದ ಪೋಷಕರನ್ನು ತೃಪ್ತಿಪಡಿಸಲು ಮದುವೆಯಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ವಧು ನೈಋತ್ಯ ಚೀನಾದ ಗ್ಯುಝೌ ಪ್ರಾಂತ್ಯದ ಯಾನ್ ಎಂಬಾಕೆ. ಮದುವೆಯ ದಿನ ವಿಡಿಯೋ ಮಾಡಿರುವ ವಧು, ತನ್ನ ನೋವನ್ನು ಬಿಚ್ಚಿಟ್ಟಿದ್ದಾಳೆ. ಬಿಳಿ ಬಣ್ಣದ ಡ್ರೆಸ್ ಧರಿಸಿದ್ದು, ಕ್ಯಾಮೆರಾ ಕಣ್ಣಿಗೆ ಕಾಣದೆ ಕಣ್ಣೀರು ಹಾಕಿದ್ದಾರೆ. ತನ್ನ ಪೋಷಕರ ನಿರೀಕ್ಷೆಗಳು ಮತ್ತು ಸಾಂಸ್ಕೃತಿಕ ರೂಢಿಗಳಿಂದಾಗಿ ತಾನು ಮದುವೆಯಾಗುತ್ತಿದ್ದೇನೆ ಎಂದು ಯಾನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

“ನನ್ನ ಹೆತ್ತವರು ವಯಸ್ಸಾಗುತ್ತಿದ್ದಾರೆ, ಮತ್ತು ನಾನು ಕೂಡ. ನನಗೆ ಮದುವೆಯೇ ಇಷ್ಟವಿಲ್ಲ. ನನ್ನ ಸಂಬಂಧಿಕರು ಮದುವೆಗೆ ನನ್ನನ್ನು ತಳ್ಳುತ್ತಿದ್ದಾರೆ ಮತ್ತು ನೆರೆಹೊರೆಯವರು ನನ್ನ ಬಗ್ಗೆ ಗಾಸಿಪ್ ಮಾಡುತ್ತಾರೆ. ಅದಕ್ಕಾಗಿಯೇ ಒಲ್ಲದ ಮದುವೆಯನ್ನು ಒಪ್ಪಿಕೊಳ್ಳುತ್ತಿದ್ದೆನೆ” ಎಂದು ಅವಳು ಕಣ್ಣೀರು ಹಾಕಿದ್ದಾಳೆ.

“ಮದುವೆಯಾಗುವುದು ನನ್ನ ಹೆತ್ತವರಿಗೆ ಸಮಾಧಾನವಾಗಲು, ನನಗಾಗಿ ನನಗೆ ಭವಿಷ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾಳೆ. ಈ ವಿಡಿಯೋಗೆ ಅನೇಕ ಮಂದಿ ಕಂಬನಿ ಮಿಡಿದಿದ್ದಾರೆ. ಹಲವರು ಸಾಂತ್ವನ ಹೇಳಿದ್ದಾರೆ. ಈಕೆಯ ಮದುವೆ ನಡೆದಿದೆಯೋ ಇಲ್ಲವೋ ತಿಳಿದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read